- Advertisement -
- Advertisement -
ಕೊಡಗಿನ ಹುತಾತ್ಮ ಯೋಧ ದಿವಿನ್ ಅವರ ಪಾರ್ಥೀವ ಶರೀರ ಅವರ ಹುಟ್ಟೂರು ತಲುಪಿದೆ. ನಿನ್ನೆ ರಾತ್ರಿ ಪಾರ್ಥೀವ ಶರೀರವನ್ನು ಕುಶಾಲನಗರದ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಇಂದು ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗೆ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ನಂತರ ಪಾರ್ಥೀವ ಶರೀರವನ್ನು ಅವರ ಸ್ವಗ್ರಾಮ ಆಲೂರು ಸಿದ್ದಾಪುರಕ್ಕೆ ಕೊಂಡೊಯ್ಯಲಾಗುವುದು. ಅಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕಿರಿಸಿ ಮಧ್ಯಾಹ್ನದ ನಂತರ ದಿವಿನ್ ಅವರ ತಂದೆಯ ಸಮಾಧಿ ಪಕ್ಕದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.
- Advertisement -