Sunday, June 7, 2026
HomeUncategorizedಬೆಳ್ತಂಗಡಿ:ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿಯಾಗಿ ಸಮಾಜ ಸೇವಕ ಕೆ. ಮೋಹನ್ ಕುಮಾರ್ ಆಯ್ಕೆ

ಬೆಳ್ತಂಗಡಿ:ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿಯಾಗಿ ಸಮಾಜ ಸೇವಕ ಕೆ. ಮೋಹನ್ ಕುಮಾರ್ ಆಯ್ಕೆ

- Advertisement -
- Advertisement -

ಬೆಳ್ತಂಗಡಿ:ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ ಮಂಗಳೂರು ಇದರ ಸೇವಾ ಕಾರ್ಯಕ್ಕೆ ನೂತನ ಟ್ರಸ್ಟಿಯಾಗಿ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲೀಕ, ಉದ್ಯಮಿ ಕೆ.ಮೋಹನ್ ಕುಮಾರ್ ನೇಮಕಗೊಂಡಿದ್ದಾರೆ.ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾಗಿ,ಉದ್ಯಮಿಯಾಗಿ,ಸಮಾಜ ಸೇವಕರಾಗಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಕೆ‌ ಮೋಹನ್ ಕುಮಾರ್  ಅವರು ಗುರುತಿಸಿಕೊಂಡಿದ್ದಾರೆ.

ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಂತ ಚಿಂತನೆ ಮಾಡಿ ಹಲವಾರು ಶಾಲೆಗಳಿಗೆ ಕಾಯಕಲ್ಪ ನೀಡಿದ್ದಾರೆ. ಬದುಕು ಕಟ್ಟೋಣ ಬನ್ನಿ ತಂಡದ ಮೂಲಕ ಯುವ ಸಮಾಜಕ್ಕೆ ಶಕ್ತಿಯಾಗಿ ಮತ್ತೊಬ್ಬರ ಬದುಕನ್ನು ಕಟ್ಟುವ ಕೆಲಸವನ್ನು ಮಾಡುತ್ತಿರುವುದು ಇವರ ಸಮಾಜಸೇವೆಗೆ ಹಿಡಿದ ಕೈಗನ್ನಡಿಯಾಗಿದೆ‌. ಹೀಗೆ ಹತ್ತು ಹಲವಾರು ಸಮಾಜಕ್ಕೆ ಪ್ರೇರಣದಾಯಿ ಕೆಲಸ ಮಾಡುತ್ತಿರುವ ಮೋಹನ್ ಕುಮಾರ್ ಪ್ರತಿಷ್ಠಿತ ಯಕ್ಷ ಧ್ರುವ ಪಟ್ಲ  ಫೌಂಡೇಶನ್ ನ ಟ್ರಸ್ಟ್ ಯಾಗಿದ್ದಾರೆ.

ಜೂನ್ 1 ರಂದು ನಡೆಯುವ ಪಟ್ಲ ಪೌಂಢೇಶನ್ ನ 10ನೇ ವರ್ಷದ ದಶಮಾನೋತ್ಸವ ಸಂಭ್ರಮಕ್ಕೆ ಕೆ. ಮೋಹನ್ ಕುಮಾರ್ ಅವರನ್ನು ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ, ಸಂಚಾಲಕ ಕಿರಣ್ ಕುಮಾರ್ ಶೆಟ್ಟಿ ಜೈನ್ ಪೇಟೆ, ಸದಸ್ಯ ವೆಂಕಟರಮಣ ಶೆಟ್ಟಿ ಉಜಿರೆ ಆಮಂತ್ರಣ ನೀಡಿ‌ ಆಹ್ವಾನಿಸಿದರು.

- Advertisement -

Latest News

error: Content is protected !!