
ಕಡೇಶಿವಾಲಯ: ಬಂಟ್ವಾಳ ತಾಲೂಕಿನ ಕಡೇಶಿವಾಲಯದ ಉತ್ಸಾಹಿ ಯುವಕರು ಸೇರಿ ಸ್ಥಾಪಿಸಿದ್ದ ಸಂಘಟನೆಯೇ ಟೀಮ್ ಯುವಶಕ್ತಿ ಕಡೇಶಿವಾಲಯ (Team YSK). ದೇಶಕ್ಕೆ ಮಹಾಮಾರಿ ಕೊರೋನಾ ವಕ್ಕರಿಸಿರುವ ಈ ಸಮಯದಲ್ಲಿ ಯಾವುದೇ ಫಲಾಫೇಕ್ಷೆ ಇಲ್ಲದೆ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವ ಈ ಸಂಘಟನೆಯ ನಿರೀಕ್ಷಿತ ಸೇವಾಯೋಜನೆ ಇಂದು ಸಂಪನ್ನಗೊಂಡಿತು.

ಹಿಂದೂ ಜಾಗರಣ ವೇದಿಕೆ ಪೆರ್ನೆ, ಯುವಕೇಸರಿ ಗಡಿಯಾರ ಮತ್ತು ಯುವವೇದಿಕೆ ಪೆರಾಜೆಯ ಸಹಯೋಗದೊಂದಿಗೆ ಯುವಶಕ್ತಿ ಯುವಕರ ಗುಂಪು ಅನೇಕ ಬಡ ಕುಟುಂಬಗಳಿಗೆ ಕಿಟ್ ವಿತರಣೆ, ಕೊರೋನಾ ವಾರಿಯರ್ಸ್ ಗಳಿಗೆ ಧೈರ್ಯ ತುಂಬುವ ಕಾರ್ಯವಾಗಿ ಕೊರೋನಾ ಪೀಡಿತರನ್ನು ಸಾಗಿಸುವ ಜಿಲ್ಲೆಯ ಆಂಬುಲೆನ್ಸ್ ಡ್ರೈವರ್ ಗಳಿಗೆ ಅಭಿನಂದಿಸಿ ಗೌರವಿಸಿದೆ.

ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರ ಸಮಕ್ಷಮದಲ್ಲಿ ಸುಮಾರು 120 ಕ್ಕೂ ಅಧಿಕ ಜಿಲ್ಲೆಯ ತುರ್ತು ಜೀವರಕ್ಷಕರನ್ನು ಗುರುತಿಸಿ ಅಭಿನಂದಿಸಿ ಆಹಾರ ಕಿಟ್ ನೀಡಿ ಸನ್ಮಾನಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯಾರಿ, ಜಿಲ್ಲಾ ಆರೋಗ್ಯಶಿಕ್ಷಣಾಧಿಕಾರಿ ಶ್ರೀಮತಿ ಜ್ಯೋತಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಶ್ರೀ ಅಶ್ರಫ್, ಜಿಲ್ಲಾ ಆಶಾ ಮೇಲ್ವೀಚಾರಕಿ ಶ್ರೀಮತಿ ಕುಮುದಾ, ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ತೇಜಶ್ರೀ ಎಸ್ ಶೆಟ್ಟಿ, ನಗರ ಕಾರ್ಯಕ್ರಮ ವ್ಯವಸ್ಥಾಪಕರು ಶ್ರೀಮತಿ ಪಯಸ್ವಿನಿ, ಜಿಲ್ಲಾ RI ಡಾಟಾ ಮ್ಯಾನೆಜರ್ ಶ್ರೀಮತಿ ವಿಧ್ಯಾ, ಜಿಲ್ಲಾ ವ್ಯವಸ್ಥಾಪಕರು 108 ಅಂಬುಲೆನ್ಸ್ ಮಹಾಬಲ, ವಾಹನ ನಿರ್ವಾಹಕ 108 ವೆಂಕಟೇಶ್, ರಾಜ್ಯದ ಅಧಿಕಾರಿಗಳಾದ (108 ಅಂಬುಲೆನ್ಸ್ ) ಗುರುರಾಜ್ ಮತ್ತು ಸದಾಶಿವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಮುಖಂಡ ರವೀಂದ್ರ ಕಂಬಳಿ, ದಿನೇಶ್ ಅಮ್ಟೂರು, ಸತೀಶ್ ಕುಂಪಲ, ಪುಷ್ಪರಾಜ್ ಚೌಟ, ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು, ಎಂ.ಪಿ ದಿನೇಶ್, ವಿಧ್ಯಾಧರ ರೈ ಅಮೈ. ಯುವಶಕ್ತಿ ಕಡೇಶಿವಾಲಯದ ಅಧ್ಯಕ್ಷ ದೇವಿಪ್ರಸಾದ್ ಬೇಂಗದಡಿ, ಯುವಕೇಸರಿ ಗಡಿಯಾರದ ಅಧ್ಯಕ್ಷ ಗಣೇಶ್ ಕೆದಿಲ, ಯುವವೇದಿಕೆ ಪೆರಾಜೆ ಅಧ್ಯಕ್ಷ ನಿತಿನ್ ಅರ್ಬಿ ಹಾಗೂ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.


