- Advertisement -
- Advertisement -
ಕಟಪಾಡಿ: ಸಮಾಜ ಸಂಘಟಕ, ನಾಟಕ ರಂಗ ನಿರ್ದೇಶಕ, ಕಲಾವಿದ, ನಿವೃತ್ತ ಪ್ರೊ. ವಿ.ಕೆ. ಉದ್ಯಾವರ ಅವರು ತಮ್ಮ 66ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮಾ. 20 ರ ಗುರುವಾರ ನಿಧನರಾಗಿದ್ದಾರೆ.
ಸಾಮಾಜಿಕ ಕಾರ್ಯಕರ್ತ, ಉತ್ತಮ ವಾಗ್ಮಿ, ಸಮಾಜಮುಖಿ ಚಿಂತಕರಾಗಿಯೂ ಗುರುತಿಸಿಕೊಂಡಿದ್ದ ಅವರು ಮೂಲತಃ ಉದ್ಯಾವರ ಅಂಕುದ್ರು ನಿವಾಸಿಯಾಗಿದ್ದು, ಪ್ರಸ್ತುತ ಮಣಿಪಾಲದಲ್ಲಿ ವಾಸ್ತವ್ಯ ಹೊಂದಿದ್ದರು.
ತಮ್ಮ ಶೈಕ್ಷಣಿಕ ಅವಧಿಯಲ್ಲಿ ಉಡುಪಿ ಬೋರ್ಡ್ ಹೈಸ್ಕೂಲ್, ಗ್ರೀನ್ ಪಾರ್ಕ್ ಕಾಲೇಜ್, ಕಾಪು ವಿದ್ಯಾನಿಕೇತನ, ತ್ರಿಷಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಆಡಳಿತಾಧಿಕಾರಿಯಾಗಿ, ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿದ್ದರು.
ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ, ಅಪಾರ ಸಂಖ್ಯೆಯ ವಿದ್ಯಾರ್ಥಿ ಬಳಗ, ಬಂಧು- ಮಿತ್ರರನ್ನು ಅಗಲಿದ್ದಾರೆ.
- Advertisement -