Friday, May 3, 2024
Homeಕರಾವಳಿ'ಅನ್ ಲೈನ್ ಸೆಕ್ಸ್' ದಂಧೆ ಮಾಡಿ ಹಾನಿಟ್ರ್ಯಾಪ್: ಯುವತಿಯ ಮೋಹಕ ಮಾತಿಗೆ ಲಕ್ಷಾಂತರ ರೂ. ಕಳೆದುಕೊಂಡ...

‘ಅನ್ ಲೈನ್ ಸೆಕ್ಸ್’ ದಂಧೆ ಮಾಡಿ ಹಾನಿಟ್ರ್ಯಾಪ್: ಯುವತಿಯ ಮೋಹಕ ಮಾತಿಗೆ ಲಕ್ಷಾಂತರ ರೂ. ಕಳೆದುಕೊಂಡ ಯುವಕರು

spot_img
- Advertisement -
- Advertisement -

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಮಂದಿ ನಾನಾ ರೀತಿಯಲ್ಲಿ ಹಣ ಮಾಡುವ ದಂಧೆಗೆ ಇಳಿದು ಅಮಾಯಕರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ರಾಜ್ಯದ ಗ್ರಾಹಕರಿಗೆ ಮೊಬೈಲ್ ಗೆ ಕರೆ ಮಾಡಿ ಬ್ಯಾಂಕ್ ಮ್ಯಾನೇಜರ್ ಎಂದು ನಂಬಿಸಿ ಒಟಿಪಿ ಪಡೆದು ಹಣ ಡ್ರಾ ಮಾಡಿ ಮೋಸ ಮಾಡುವುದು. ಆರ್ಮಿ ಸಿಬ್ಬಂದಿ ಎಂದು ನಕಲಿ ಐಡಿ ಕಾರ್ಡ್ ಕಳುಹಿಸಿ ನಂಬಿಸಿ ಕಾರು, ಬೈಕ್ ಸೇಲ್ ಇದೆ ಹೇಳಿ ಮುಂಗಡ ಹಣ ಪಡೆದು ವಂಚಿಸುವುದು. ಗೀಫ್ಟ್ ಬಂದಿದೆ ಎಂದು ನಂಬಿಸಿ ಮುಂಗಡ ಹಣ ಪಡೆದು ವಂಚಿಸುವುದು ಹೀಗೆ ನಾನಾ ಮಾರ್ಗಗಳ ಮೂಲಕ ಅಮಾಯಕರಿಂದ ಹಣ ಮಾಡುವ ದಂಧೆ ಇಳಿದು ಲಕ್ಷಾಂತರ ಹಣ ಮಾಡುತ್ತಿದ್ದಾರೆ. ಈ ಹಿಂದೆ ಇರುವ ಜಾಲದ ಮೂಲ ಸ್ಥಳ ದಿಲ್ಲಿ, ಉತ್ತರ ಪ್ರದೇಶ , ಮುಂಬಯಿ ಮುಂತಾದ ಕಡೆಗಳಿಂದ ಕಾರ್ಯಾಚರಿಸುತ್ತಿದ್ದು ರಾಜ್ಯದ ಪೊಲೀಸರಿಗೂ ಈ ಪ್ರಕರಣಗಳ ಬಗ್ಗೆ ತಲೆನೋವಾಗಿ ಪರಿಣಾಮಿಸಿದೆ.

ಇತ್ತೀಚಿನ ಕೆಲ ದಿನಗಳಿಂದ ಹೊಸ ‘ಅನ್ ಲೈನ್ ಸೆಕ್ಸ್ ‘ ಎಂಬ ಸೋಶಿಯಲ್ ಮಿಡಿಯಾದ ಹಾನಿ ಟ್ರ್ಯಾಪ್ ದಂಧೆ ಆರಂಭವಾಗಿದ್ದು ಫೇಸ್ ಬುಕ್ ನಲ್ಲಿ ಯುವತಿಯರು ಫ್ಯಾಶನ್ ಫೋಟೋಗಳನ್ನು ತೆಗೆದು ಅಪ್ ಲೋಡ್ ಮಾಡಿ ನಂತರ ಅಮಾಯಕ ಯುವಕರಿಗೆ ಫ್ರೇಂಡ್ ರಿಕ್ವೇಸ್ಟ್ ಕಳುಹಿಸುತ್ತಾರೆ. ಒಂದು ವೇಳೆ ಯುವಕರು ಅಕ್ಸೆಪ್ಟ್ ಮಾಡಿದ ಮೇಲೆ ಮೇಸೆಂಜರಿಗೆ ‘ಹಾಯ್’ಮೇಸೆಜ್ ಹಾಕಿ ಬಲೆ ಬಿಸುತ್ತಾರೆ. ಯುವತಿ ತುಂಬಾ ಕ್ಲೋಸ್ ಆಗುತ್ತಿದ್ದಾಳೆ ಎಂದು ವಾಪಸ್ ಮೇಸೆಜ್ ಮಾಡುತ್ತಾ ಹೋದ್ರೆ, ನಿನ್ನ ಊರು, ಕೆಲಸ ಎಂದೆಲ್ಲ ಮಾಹಿತಿ ಪಡೆದುಕೊಂಡು ನಂತರ ನಿನಗೆ ಸೆಕ್ಸ್ ಬಗ್ಗೆ ಇಷ್ಟ ಇದೆಯ ಹೇಳಿ ನಿಮ್ಮ ವಾಟ್ಸಾಪ್ ನಂಬರ್ ಕೋಡು ಎಂದು ಕೇಳಿ ಪಡೆಯುತ್ತಾರೆ.

ವಾಟ್ಸಾಪ್ ನಲ್ಲಿ ‘ಹಾಯ್’ ಎಂದು ಹಾಕಿ ನೀನು ರೂಂ ನಲ್ಲಿದ್ದಿಯಾ ಬೇಗಾ ‘ಬಾತ್ ರೂಂ ‘ಹೋಗು ವಿಡಿಯೋ ಕಾಲ್ ಮಾಡುತ್ತೇನೆ ನಾವು ‘ಅನ್ ಲೈನ್ ಸೆಕ್ಸ್ ‘ ಮಾಡುವ ಎಂದೆಲ್ಲ ಹೇಳಿ ಅಸೆ ಹುಟ್ಟಿಸುತ್ತಾಳೆ. ಆಕೆ ವಾಟ್ಸಾಪ್ ಕರೆ ಮಾಡಿ ಅವಳ ಅಶ್ಲೀಲ ನಗ್ನ ದೇಹವನ್ನು ನಿಮಗೆ ತೋರಿಸುತ್ತಾಳೆ ಅವಳಂತೆ ನಿಮ್ಮನ್ನು ಮಾಡಲು ಹೇಳಿ ಮುಖ ಸಮೇತ ತೋರಿಸಲು ಹೇಳಿ ನಿಮ್ಮೆಲ್ಲ ‘ಆ ಅಶ್ಲೀಲ ನಗ್ನ ದೃಶ್ಯವನ್ನು ರೆಕಾರ್ಡ್ ಮಾಡುತ್ತಾಳೆ. ಕೊನೆಗೆ ನಿಮ್ಮ ಫೇಸ್ ಬುಕ್ ನ ಮ್ಯೂಚುಯಲ್ ಫ್ರೆಂಡ್ಸ್ ಗಳ ಮಾಹಿತಿ ನೋಡಿ ಅದರ ಸ್ರ್ಕೀನ್ ಶಾಟ್ ರೆಡಿ ಮಾಡಿ. ಅದನ್ನು ವಾಟ್ಸಾಪ್ ನಲ್ಲಿ ಹಾಕಿ ಬೆದರಿಸುತ್ತಾಳೆ.

ನಾನು ಕೇಳಿದಷ್ಟು ನೀನು ಹಣ ನೀಡಬೇಕು ಇಲ್ಲದಿದ್ದಾರೆ ನಿನ್ನ ‘ಆ ನಗ್ನ ‘ಕಾಮದಾಟದ ದೃಶ್ಯದ ವಿಡಿಯೋ ನಿನ್ನ ಗೆಳೆಯರಿಗೆ ಕಳುಹಿಸುತ್ತೇನೆ. ಅಲ್ಲದೆ ಸೋಶಿಯಲ್ ಮಿಡಿಯಾದಲ್ಲಿ ಎಲ್ಲಾ ಕಡೆ ವೈರಲ್ ಮಾಡುವುದಾಗಿ ಭಯಪಡಿಸಿ ಬೆದರಿಸುತ್ತಾಳೆ. ಇದರ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಯುವಕರಿಗೆ ಮುಜುಗಾರವಾಗುತ್ತೆ. ಅಲ್ಲದೆ ಆ ವಿಚಾರ ಯಾರಲ್ಲಿಯೂ ಹೇಳುವ ಪರಿಸ್ಥಿತಿ ಇರುವುದಿಲ್ಲ ಕೊನೆಗೆ ಯಾವುದೇ ಬೇರೆ ಉಪಾಯವಿಲ್ಲದೆ ಅವಳು ತಿಳಿಸಿದ ಗೂಗಲ್ ಪೇ ಸಂಖ್ಯೆಗೆ ಹಣ ಹಾಕಿ ಸುಮ್ಮನಿರಬೇಕಾಗುತ್ತೆ.

ಈ ‘ಅನ್ ಲೈನ್ ಸೆಕ್ಸ್ ‘ದಂಧೆಯ ಫೇಸ್ ಬುಕ್ ಚಾಟಿಂಗ್ ,ಮೆಸೆಂಜರ್ ಚಾಟಿಂಗ್ ಮತ್ತು ವಾಟ್ಸಾಪ್ ನಲ್ಲಿ ವಿಡಿಯೋ ಕಾಲ್ ಮೂಲಕ ನಡೆಯುವ ಲೈವ್ ಸೆಕ್ಸ್ ದಂಧೆಯ ಪ್ರತಿ ದೃಶ್ಯಗಳು ಮಹಾ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದೆ. ಇಂತಹ ಘಟನೆ ಉಡುಪಿ,ಮಂಗಳೂರು, ಪುತ್ತೂರು, ಬಂಟ್ವಾಳ, ಬೆಳ್ತಂಗಡಿಗಳಲ್ಲಿ ಸಂಭವಿಸಿ ಅನೇಕ ಯುವಕರು ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಆದ್ರೆ ಈ ಬಗ್ಗೆ ಯಾರೊಬ್ಬರು ದೂರು ನೀಡದೆ ಕೇಳಿದ ಹಣ ಕೊಟ್ಟು ಸುಮ್ಮನಿದ್ದಾರೆ.

ಕೆಲದಿನದ ಹಿಂದೆ ಧರ್ಮಸ್ಥಳದ ಒಬ್ಬ ಯುವಕ ಮತ್ತು ಬೆಳ್ತಂಗಡಿಯ ಯುವಕ, ಇದೇ ಯುವತಿ ಮುಂದೆ ಬೆತ್ತಲಾಗಿ ‘ಹ್ಯಾನಿಟ್ರ್ಯಾಪ್’ ಜಾಲಕ್ಕೆ ಬಿದ್ದು ಒದ್ದಾಡಿ ಕೊನೆಗೆ ಒಬ್ಬ ಯುವಕ ಅವಳು ಕೇಳಿದ ಹತ್ತು ಸಾವಿರ ರೂಪಾಯಿ ಹಣ ಹಾಕಿದ್ದಾನೆ. ಮತ್ತೊಬ್ಬ ಫೇಸ್ ಬುಕ್ ಡಿಲಿಟ್ ಮಾಡಿದ್ದಾನೆ. ಮೋಸ ಹೋದ ಯುವಕನೊಬ್ಬ ಮಹಾ ಎಕ್ಸ್ ಪ್ರೆಸ್ ವೆಬ್ ಸೈಟ್ ಗೆ ವಂಚನೆಯಾಗುವ ಬಗ್ಗೆ ಎಲ್ಲಾ ಸ್ರ್ಕೀನ್ ಶಾಟ್ ಗಳನ್ನು ನೀಡಿ ಮುಂದೆ ಈ ರೀತಿಯ ‘ಅನ್ ಲೈನ್ ಸೆಕ್ಸ್ ‘ ದಂಧೆಯ ಬಲೆಗೆ ಬಿಳದಂತೆ ಸರ್ವಜನಿಕರಿಗೆ ಎಚ್ಚರಿಸಲು ಮನವಿ ಮಾಡಿದ್ದಾನೆ.

ಈ ವಂಚನೆ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೂ ಕೆಲವು ಕಾನೂನು ತೋಡಕುಗಳಿಂದ ಯುವತಿಯರ ಮೇಲೆ ಕ್ರಮ ಕೈಗೊಳ್ಳಲು ಅಗುವುದಿಲ್ಲ. ಮತ್ತೊಂದೆಡೆ ನೀವು ಬೆತ್ತಲಾಗಿ ಕಳೆದುಕೊಂಡ 10-20 ಸಾವಿರ ಹಣಕ್ಕೆ ಪೊಲೀಸರು 50 ಸಾವಿರ ಖರ್ಚು ಮಾಡಿ ಉತ್ತರಪ್ರದೇಶ ಕಡೆಗಳಿಗೆ ಹೋಗಿ ಅವರ ವಿರುದ್ದ ಕ್ರಮ ಕೈಗೊಂಡು ಹಣ ವಸೂಲಿ ಮಾಡವುದು ಕಷ್ಟದ ಕೆಲಸ.

ಕೊರೊನಾ ಮಹಾ ಮಾರಿಯಿಂದ ಅಪ್ರಾಪ್ತ ಯುವಕರು ಅನ್ ಲೈನ್ ವಿದ್ಯಾಬ್ಯಾಸಕ್ಕಾಗಿ ಮೊಬೈಲ್ ಹಿಡಿಕೊಂಡಿದ್ದು ಅದೇಷ್ಟೋ ಮಂದಿ ಸೋಶಿಯಲ್ ಮಿಡಿಯಾದಲ್ಲಿ ಕಾಲಕಳೆಯುತ್ತಿದ್ದಾರೆ ಇದರ ಬಗ್ಗೆ ಪೊಷಕರ ಎಚ್ಚರವಹಿಸುವುದು ಉತ್ತಮ.

ಇನ್ನೂ ಯುವಕರೇ ಫೇಸ್ ಬುಕ್, ಇನ್ಟ್ರಾಗ್ರಾಮ್ , ವಾಟ್ಸಾಪ್ ಮುಂತಾದ ಆಪ್ ಗಳಲ್ಲಿ ಗುರುತು -ಪರಿಚಯ ಇಲ್ಲದ ಯುವತಿಯರು ಫ್ರೇಂಡ್ ರಿಕ್ವೇಸ್ಟ್ ಕಳುಹಿಸಿದ್ರೆ ಮೊದಲು ಅಸಲಿಯ ನಕಲಿಯ ಎಂದು ನೋಡಿ ಗೆಳೆತನ ಮಾಡಿ ಯಾವುದಕ್ಕೂ ಯುವಕರೇ ಎಚ್ಚರ ಇಲ್ಲವಾದರೆ ನೀವು ಸೋಶಿಯಲ್ ಮಿಡಿಯಾದಲ್ಲಿ ಬೆತ್ತಲಾಗುವುದು ಖಂಡಿತ.

- Advertisement -
spot_img

Latest News

error: Content is protected !!