Wednesday, June 3, 2026
Homeಕರಾವಳಿಬೆಳ್ತಂಗಡಿ : ಬಟ್ಟೆ ನುಂಗಿದ ನಾಗರ ಹಾವು: ನುಂಗಿದ ಬಟ್ಟೆಯನ್ನು ಹೊರತೆಗೆದ ಸ್ನೇಕ್ ಅಶೋಕ್‌

ಬೆಳ್ತಂಗಡಿ : ಬಟ್ಟೆ ನುಂಗಿದ ನಾಗರ ಹಾವು: ನುಂಗಿದ ಬಟ್ಟೆಯನ್ನು ಹೊರತೆಗೆದ ಸ್ನೇಕ್ ಅಶೋಕ್‌

- Advertisement -
- Advertisement -

ಬೆಳ್ತಂಗಡಿ : ಬಟ್ಟೆ ನುಂಗಿದ ನಾಗರಹಾವೊಂದರ ಬಾಯಿಯಿಂದ ಬಟ್ಟೆ ಹೊರ ತೆಗೆದು ನಂತರ ಅದನ್ನು ಸ್ನೇಕ್ ಅಶೋಕ್ ಅವರು ಕಾಡಿಗೆ ಬಿಟ್ಟ ಘಟನೆ ಬೆಳ್ತಂಗಡಿಯ ಕಳೆಂಜದಲ್ಲಿ ನಡೆದಿದೆ

ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಶಾಲೆತಡ್ಕ ನಿವಾಸಿ ಅಶೋಕ್‌ ಪೂಜಾರಿ ಎಂಬವರ ಮನೆಯ ಕೊಟ್ಟಿಗೆಯ ಬದಿಯಲ್ಲಿ ಸುಮಾರು 4 ಅಡಿ ಉದ್ದದ ನಾಗರ ಹಾವು ಬಟ್ಟೆಯೊಂದನ್ನು ನುಂಗಿದ್ದನ್ನು ಗಮನಿಸಿದ ಮನೆಯವರು ಸ್ನೇಕ್ ಅಶೋಕ್ ಲಾಯಿಲ ಇವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದು ನಾಗರಹಾವನ್ನು ಹಿಡಿದು ನುಂಗಿದ್ದ ಬಟ್ಟೆಯನ್ನು ಹೊರತೆಗೆದು ನಂತರ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ‌.

- Advertisement -

Latest News

error: Content is protected !!