Sunday, May 19, 2024
Homeಕರಾವಳಿಉಡುಪಿಉಡುಪಿ: ವರ್ಷದೊಳಗೆ 7ನೇ ವೇತನ ಆಯೋಗದ ಸೌಲಭ್ಯ ಜಾರಿ: ಸಿ.ಎಸ್. ಷಡಾಕ್ಷರಿ ಭರವಸೆ

ಉಡುಪಿ: ವರ್ಷದೊಳಗೆ 7ನೇ ವೇತನ ಆಯೋಗದ ಸೌಲಭ್ಯ ಜಾರಿ: ಸಿ.ಎಸ್. ಷಡಾಕ್ಷರಿ ಭರವಸೆ

spot_img
- Advertisement -
- Advertisement -

ಉಡುಪಿ: ಸರಕಾರಿ ನೌಕರರ 7ನೇ ವೇತನ ಆಯೋಗದ ರಚನೆ ಕುರಿತಂತೆ ಒಂದು ತಿಂಗಳೊಳಗೆ ಸಮಿತಿ ರಚನೆಯಾಗಲಿದೆ. ಇದೇ ವರ್ಷದ ಡಿಸೆಂಬರ್ ಒಳಗೆ ರಾಜ್ಯದ ಸರಕಾರಿ ನೌಕರರ ಬಹು ನಿರೀಕ್ಷಿತ ವೇತನ ಆಯೋಗದ ಸೌಲಭ್ಯಗಳನ್ನು ನೌಕರರಿಗೆ ದೊರಕಿಸುವಲ್ಲಿ ಸಂಘ ಬದ್ಧವಾಗಿದೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.

ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ರವಿ ವಾರ ಜರಗಿದ ಜಿಲ್ಲಾ ಸರಕಾರಿ ನೌಕರರ ವಾರ್ಷಿಕ ಸಮಾವೇಶದಲ್ಲಿ ಅವರು ಮಾತನಾಡಿದರು. ಈ ಡಿಸೆಂಬರ್ ಒಳಗೆ ಆರ್ಥಿಕ ಸೌಲಭ್ಯಗಳನ್ನು ನೌಕರರಿಗೆ ನೀಡುವಂತೆ ಸರ ಕಾರದ ಮೇಲೆ ಒತ್ತಡ ಹಾಕಲಾಗಿದ್ದು, ಡಿ ದರ್ಜೆ ನೌಕರರಿಗೆ 10 ಸಾವಿರ ರೂ., ಸಿ ದರ್ಜೆ ನೌಕರರರಿಗೆ 20 ಸಾವಿರ ರೂ., ಬಿ ದರ್ಜೆ ಅಧಿಕಾರಿಗಳಿಗೆ 30 ಸಾವಿರ ರೂ. ಹಾಗೂ ಎ ದರ್ಜೆ ಅಧಿಕಾರಿಗಳಿಗೆ ಕನಿಷ್ಠ 40 ಸಾವಿರ ರೂ. ವರೆಗೆ ವೇತನ ಹೆಚ್ಚಳವಾಗಲಿದೆ ಎಂದರು.

- Advertisement -
spot_img

Latest News

error: Content is protected !!