- Advertisement -
- Advertisement -
ಕೊಟ್ಟಿಗೆಹಾರ; : ನಾಗರಹಾವೊಂದು ಹೋಟೆಲ್ ಗೆ ನುಗ್ಗಿ ಹತ್ತು ಕೋಳಿ ಮೊಟ್ಟೆಗಳನ್ನು ಏಕಕಾಲಕ್ಕೆ ನುಂಗಿ ತೆವಳಲಾಗದೆ ಪರದಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.
ಕೊಟ್ಟಿಗೆಹಾರದ ಉಡುಪಿ ವೈಭವ್ ಹೋಟೆಲ್ ಗೆ ನುಗ್ಗಿದ್ದ ನಾಗರಹಾವು ಹೋಟೆಲ್ ನಲ್ಲಿದ್ದ 10 ಕೋಳಿ ಮೊಟ್ಟೆಗಳನ್ನು ನುಂಗಿದೆ. ನಾಗರಹಾವು ಹೋಟೆಲ್ ಗೆ ನುಗ್ಗಿರುವ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಆರೀಫ್ ಹಾವನ್ನು ಹೋಟೆಲ್ ನಿಂದ ಹೊರ ತಂದು ನುಂಗಿದ್ದ ಮೊಟ್ಟೆಗಳನ್ನು ಹೊರ ವಾಂತಿ ಮಾಡಿಸಿದ್ದಾರೆ. ನಂತರ ಹೋಟೆಲ್ ಮಾಲೀಕ ತೆಂಗಿನಕಾಯಿ ಒಡೆದು ನಾಗರಹಾವಿಗೆ ಯಾವುದೇ ತೊಂದರೆಯಾಗದಂತೆ ಪೂಜೆ ಸಲ್ಲಿಸಿದ್ದು, ಉರಗ ತಜ್ಞ ಆರೀಫ್ ಹಾವನ್ನು ಚಾರ್ಮಾಡಿ ಘಾಟ್ ಗೆ ಬಿಟ್ಟಿದ್ದಾರೆ.
- Advertisement -