Sunday, June 7, 2026
Homeತಾಜಾ ಸುದ್ದಿಶಾರ್ಕ್ ಮೀನಿನ ಸಂಸ್ಕರಿಸಿದ ರೆಕ್ಕೆಗಳ ಕಳ್ಳ ಸಾಗಣೆ- ಇಬ್ಬರನ್ನು ಬಂಧಿಸಿದ ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ಅಧಿಕಾರಿಗಳು!….

ಶಾರ್ಕ್ ಮೀನಿನ ಸಂಸ್ಕರಿಸಿದ ರೆಕ್ಕೆಗಳ ಕಳ್ಳ ಸಾಗಣೆ- ಇಬ್ಬರನ್ನು ಬಂಧಿಸಿದ ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ಅಧಿಕಾರಿಗಳು!….

- Advertisement -
- Advertisement -

ಚೆನ್ನೈ:ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶಾರ್ಕ್ ಮೀನಿನ ಸಂಸ್ಕರಿಸಿದ 23.5ಕೆಜಿ ರೆಕ್ಕೆಗಳನ್ನು ದುಬೈಗೆ ಕಳ್ಳ ಸಾಗಣೆ ಮಾಡಲು ಯತ್ನಿಸಿದ್ದ ಇಬ್ಬರನ್ನು ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ. ಇದರ ಮೌಲ್ಯ 16.5 ಲಕ್ಷ ರೂಪಾಯಿ ಎಂದು ಹೇಳಲಾಗಿದ್ದು, ದುಬೈಗೆ ವನ್ಯ/ಸಮುದ್ರ ಜೀವಿಗಳ ಉತ್ಪನ್ನ ಕಳ್ಳಸಾಗಣೆಯಾಗಲಿದೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ತನಿಖೆ ನಡೆಸಲಾಗಿದೆ.

ರೆಕ್ಕೆಗಳನ್ನು ವಿಮಾನ ನಿಲ್ದಾಣದೊಳಕ್ಕೆ ರಟ್ಟಿನಪೆಟ್ಟಿಗೆಯಲ್ಲಿ ತಂದು ದುಬೈಗೆ ಕಳ್ಳ ಸಾಗಣೆ ಮಾಡಲು ಯತ್ನಿಸಿದ್ದರು. ಬಾಕ್ಸ್ ಗಳನ್ನು ಪರಿಶೀಲಿಸಿದಾಗ ಅದರೊಳಗೆ ಮೂರು ಗೋಣಿ ಚೀಲ ಪತ್ತೆಯಾಗಿತ್ತು. ಅದರಲ್ಲಿ ಶಾರ್ಕ್ ಮೀನಿನ ರೆಕ್ಕೆ ಇದ್ದು, 9.5 ಕೆಜಿ ಹೊಂದಿತ್ತು.ಎರಡು ಬ್ಯಾಗ್ ಸೇರಿ ಒಟ್ಟು 14 ಕೆಜಿ ಶಾರ್ಕ್ ರೆಕ್ಕೆಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.

ಶಾರ್ಕ್ ಮೀನಿನ ರೆಕ್ಕೆಗಳ ಸೂಪ್ ತುಂಬಾ ದುಬಾರಿಯಾಗಿದ್ದು, ಇದು ವಿದೇಶದ ಐಶಾರಾಮಿ ರೆಸ್ಟೋರೆಂಟ್ ಗಳಲ್ಲಿ ಲಭ್ಯವಿದೆ. ಚೀನಾದಲ್ಲಿ ಶಾರ್ಕ್ ರೆಕ್ಕೆ ಬಹುಬೇಡಿಕೆ. ಚೀನಾ ಜನರು ಇದನ್ನು ಸಮೃದ್ಧಿ, ಸ್ಥಾನಮಾನ ಮತ್ತು ಆರೋಗ್ಯದ ಸಂಕೇತವೆಂದು ಪರಿಗಣಿಸುವ ಕಾರಣ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎನ್ನಲಾಗಿದೆ.ಅಪರಾಧಿಗಳನ್ನು ಸಥ್ತಾಕ್ಕಾತುಲ್ಲಾ(52) ಹಾಗೂ ತಿರುಚಿರಾಪ್ಪಲಿಯ ಅಬ್ಬಾಸ್ (29ವರ್ಷ) ಎಂದು ಗುರುತಿಸಲಾಗಿದೆ. ಇವರ ಪಾಸ್ ಪೋರ್ಟ್ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!