Monday, June 8, 2026
Homeತಾಜಾ ಸುದ್ದಿಬಂಟ್ವಾಳ: ಯಾಕೆ ಅಂಗಡಿಯನ್ನು ತಡವಾಗಿ ತೆರೆಯುತ್ತೀಯಾ' ಎಂದು ಹೇಳಿ ಅಂಗಡಿ ಮಾಲಿಕನಿಗೆ ಚೂರಿಯಿಂದ ಹಲ್ಲೆ

ಬಂಟ್ವಾಳ: ಯಾಕೆ ಅಂಗಡಿಯನ್ನು ತಡವಾಗಿ ತೆರೆಯುತ್ತೀಯಾ’ ಎಂದು ಹೇಳಿ ಅಂಗಡಿ ಮಾಲಿಕನಿಗೆ ಚೂರಿಯಿಂದ ಹಲ್ಲೆ

- Advertisement -
- Advertisement -

ಬಂಟ್ವಾಳ: ಅಂಗಡಿ ತೆರೆಯುತ್ತಿದ್ದ ವೇಳೆ ಅಂಗಡಿ ಮಾಲಕನು ಏಕಾಏಕಿ ಬಂದು ‘ಯಾಕೆ ಅಂಗಡಿಯನ್ನು ತಡವಾಗಿ ತೆರೆಯುತ್ತೀಯಾ’ ಎಂದು ಹೇಳಿ ಹರಿತವಾದ ಆಯುಧದಿಂದ ಇರಿದು ಜೀವಬೆದರಿಕೆ ಹಾಕಿದ ಘಟನೆ ಬಂಟ್ವಾಳದ ಮೆಲ್ಕಾರ್ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಸದಕತುಲ್ಲಾ (35) ಎಂದು ಗುರುತಿಸಲಾಗಿದೆ.

ಸದಕತುಲ್ಲಾ ಮೆಲ್ಕಾರ್ ಎಂಬಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಬಟ್ಟೆ ಅಂಗಡಿಯನ್ನು 7 ವರ್ಷಗಳ ಹಿಂದೆ ಬಾಡಿಗೆಗಾಗಿ ನಿಸಾರ ಅಹಮ್ಮದ್ ರವರಿಂದ ಪಡೆದಿದರು. ಆದರೆ ನಿನ್ನೆ ಗಾರ್ಮೆಂಟ್ಸ್ ಅಂಗಡಿ ತೆರೆಯುತ್ತಿದ್ದ ಸಂದರ್ಭ ನಿಸಾರ ಅಹಮ್ಮದ್ ಏಕಾಏಕಿ ಅಂಗಡಿಯ ಹತ್ತಿರ ಬಂದು ಯಾಕೆ ಅಂಗಡಿಯನ್ನು ತಡವಾಗಿ ತೆರೆಯುತ್ತೀಯಾ ಎಂದು ಪ್ರಶ್ನಿಸಿದ್ದಾರೆ.

ನಂತರ ಆತನ ಅಡುಗೆ ಕೋಣೆಯಲ್ಲಿದ, ಹರಿತವಾದ ಆಯುಧದಿಂದ ಸದಕತಲ್ಲಾ ಎಡಕಣ್ಣಿನ ಕೆಳಭಾಗ, ಮೂಗಿನ ಬಲಭಾಗ, ಎಡಕಿವಿಯ ಮೇಲ್ಭಾಗ, ಬಾಲಕಣ್ಣಿನ ಬಲಬದಿ, ಬಲಗಲ್ಲ ಎಡ ಮತ್ತಿಗೆ ಮತ್ತು ಕುತ್ತಿಗೆಯ ಹಿಂಭಾಗ, ಎದೆಯ ಭಾಗಕ್ಕೆ ಗೀರಿದ್ದಾರೆ.

ಆಮೇಲೆ ನಿನ್ನನ್ನು ನೋಡುತ್ತೇನೆ, ನಿನ್ನನ್ನು ಕೊಲ್ಲುತ್ತೇನೆ ನಿನ್ನನ್ನು ಶೂಟ್ ಮಾಡುತ್ತೇನೆ ಎಂದು ಬೆದರಿಸಿದ್ದಾರೆ.ಈ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!