Saturday, June 6, 2026
Homeಕರಾವಳಿಮಂಗಳೂರು :ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಇಂದು ದ.ಕ. ಜಿಲ್ಲೆಯ ಹಲವೆಡೆ ಪ್ರತಿಭಟನೆ!

ಮಂಗಳೂರು :ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಇಂದು ದ.ಕ. ಜಿಲ್ಲೆಯ ಹಲವೆಡೆ ಪ್ರತಿಭಟನೆ!

- Advertisement -
- Advertisement -

ಮಂಗಳೂರು: ಮುಸ್ಲಿಂ ಸಮುದಾಯದ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ಪ್ರಚೋದನಾಕಾರಿ ಹೇಳಿಕೆ ಪ್ರವಾದಿ ನಿಂದನೆ ಹಾಗೂ ದೌರ್ಜನ್ಯವನ್ನು ವಿರೋಧಿಸಿ ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಇಂದು ಸಂಜೆ 4 ಗಂಟೆಗೆ ದ.ಕ. ಜಿಲ್ಲೆಯ 12 ಕಡೆಗಳಲ್ಲಿ ಪ್ರತಿಭಟನೆ ನಡೆಯಲಿದೆ.

‘ಪ್ರಚೋದನೆಯನ್ನು ಪ್ರಬುದ್ಧತೆಯಿಂದ ಎದುರಿಸೋಣ’ ಎಂಬ ಶೀರ್ಷಿಕೆಯಲ್ಲಿ ದ.ಕ. ಜಿಲ್ಲೆಯ ಮಂಗಳೂರು ಕ್ಲಾಕ್ ಟವರ್, ಪುತ್ತೂರು ವೀರ ಜವಾನ್ ಸ್ಮಾರಕ ಮಿನಿ ವಿಧಾನ ಸೌಧ, ಗುರುಪುರ ಕೈಕಂಬ ಜಂಕ್ಷನ್, ಬೆಳ್ತಂಗಡಿ ಮಿನಿ ವಿಧಾನ ಸೌದದ ಮುಂಭಾಗ, ಸುಳ್ಯ ಗಾಂಧಿ ನಗರ, ಮೂಡುಬಿದಿರೆ ನಾಡ ಕಚೇರಿ ಮುಂಭಾಗ, ವಿಟ್ಲ ಜಂಕ್ಷನ್, ಬಿ.ಸಿ.ರೋಡ್ ಕೈಕಂಬ ಜಂಕ್ಷನ್, ಉಪ್ಪಿನಂಗಡಿ ಹೊಸ ಬಸ್ ನಿಲ್ದಾಣ, ಕಡಬ ಬಸ್ ನಿಲ್ದಾಣ, ದೇರಳಕಟ್ಟೆ ಜಂಕ್ಷನ್, ಸುರತ್ಕಲ್ ನಲ್ಲಿ ಹೀಗೆ ಹನ್ನೆರಡು ವಲಯಗಳಲ್ಲಿ ಏಕಕಾಲಕ್ಕೆ ಪ್ರತಿಭಟನೆ ನಡೆಯಲಿದೆ ಎಂದು ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!