Sunday, June 7, 2026
Homeಅಪರಾಧಉಳ್ಳಾಲ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ; ಆರೋಪಿ ಬಂಧನ!

ಉಳ್ಳಾಲ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ; ಆರೋಪಿ ಬಂಧನ!

- Advertisement -
- Advertisement -

ಉಳ್ಳಾಲ: ಖರೀದಿಗೆ ಬಂದಿದ್ದ 13 ವರ್ಷದ ಬಾಲಕಿಯನ್ನು ಬೇಕರಿ ಅಂಗಡಿಯ ಒಳಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕೊಣಾಜೆ ಸೂಪರ್ ಸ್ಟೋರ್ಸ್ & ಸ್ವೀಟ್ಸ್ ಮಾಲಕನ ಪುತ್ರನನ್ನ ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಯನ್ನು ಪಜೀರು ನಿವಾಸಿ ಉಸ್ಮಾನ್ (35) ಎಂದು ಗುರುತಿಸಲಾಗಿದ್ದು, ಬಂಧಿತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ನಿನ್ನೆ ಸಂಜೆ 13 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಕೊಣಾಜೆ ಜಂಕ್ಷನ್ ನಲ್ಲಿರುವ ಕೊಣಾಜೆ ಸೂಪರ್ ಸ್ಟೋರ್ಸ್ & ಸ್ವೀಟ್ಸ್ ಬಝಾರ್ ಗೆ ತೆರಳಿದ್ದು ಈ ವೇಳೆ ಆರೋಪಿ ಉಸ್ಮಾನ್ ಬಾಲಕಿಯನ್ನ ಪುಸಲಾಯಿಸಿ ಒಳಗೆ ಕರೆದೊಯ್ದಿದ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಇದರಿಂದ ಬೆದರಿದ ಬಾಲಕಿ ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದು ತಾಯಿಯಲ್ಲಿ ವಿಚಾರ ತಿಳಿಸಿದ್ದಾಳೆ.

ವಿಚಾರ ತಿಳಿದ ಬಜರಂಗದಳ ಕಾರ್ಯಕರ್ತರು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಆರೋಪಿ ಉಸ್ಮಾನ್ ನನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಅಂಗಡಿಗೆ ನುಗ್ಗಿದ ತಂಡವೊಂದು ಉಸ್ಮಾನ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪ್ರತಿದೂರನ್ನು ನೀಡಲಾಗಿದೆ. ಈ ಬಗ್ಗೆಯು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!