Wednesday, June 24, 2026
Homeಕರಾವಳಿಮಂಗಳೂರುಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿದ ಆರೋಪ ಪ್ರಕರಣ; ದೂರುದಾರ ತೋರಿಸಿದ ಗುರುತು ಹಾಕದ ಜಾಗದಲ್ಲಿ ಅಸ್ಥಿಪಂಜರ...

ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿದ ಆರೋಪ ಪ್ರಕರಣ; ದೂರುದಾರ ತೋರಿಸಿದ ಗುರುತು ಹಾಕದ ಜಾಗದಲ್ಲಿ ಅಸ್ಥಿಪಂಜರ ಪತ್ತೆ

- Advertisement -
- Advertisement -

ಬೆಳ್ತಂಗಡಿ;  ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ಖನನ ಕಾರ್ಯ ನಡೆಯುತ್ತಿದ್ದು ಇವತ್ತು ದೂರುದಾರ ತೋರಿಸಿದ ಗುರುತು ಹಾಕದ ಜಾಗದಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ.

ದೂರುದಾರ ಬಂಗ್ಲ ಗುಡ್ಡೆ ಎಂಬ ಅರಣ್ಯ ಪ್ರದೇಶದ ಜಾಗದಲ್ಲಿ ತೋರಿಸಿದ ಸ್ಥಳದಲ್ಲಿ ಅಸ್ಥಿಪಂಜರದ ಮೂಳೆಗಳು ಪತ್ತೆಯಾಗಿದೆ ಎನ್ನಲಾಗಿದೆ. ಈ ಜಾಗವನ್ನು ಎಸ್ ಐಟಿ ಗುರುತು ಹಾಕಿರಲಿಲ್ಲ. ಇಂದು ಆ ಜಾಗವನ್ನು ದೂರಾದರ ತೋರಿಸಿದ ಹಿನ್ನೆಲೆ ಅಲ್ಲಿ ಉತ್ಖನನ ಮಾಡಲಾಗಿತ್ತು. ಈ ವೇಳೆ ಮೂಳೆಗಳು ಸಿಕ್ಕಿರುವುದು ಎಂದು ಎಸ್ ಐಟಿ ಮೂಲಗಳು ಮಾಹಿತಿ ನೀಡಿವೆ.

- Advertisement -

Latest News

error: Content is protected !!