Friday, June 5, 2026
Homeಕರಾವಳಿಕಾಣಿಯೂರಿನಲ್ಲಿ ಕಾರಿನಿಂದ ಹೊರಗೆಳೆದು ಹಲ್ಲೆ ಪ್ರಕರಣದಲ್ಲಿ ಆರು ಮಂದಿ ಅರೆಸ್ಟ್

ಕಾಣಿಯೂರಿನಲ್ಲಿ ಕಾರಿನಿಂದ ಹೊರಗೆಳೆದು ಹಲ್ಲೆ ಪ್ರಕರಣದಲ್ಲಿ ಆರು ಮಂದಿ ಅರೆಸ್ಟ್

- Advertisement -
- Advertisement -

ಬೆಳ್ಳಾರೆ: ಮಹಿಳೆಯ ಮಾನಭಂಗ ಯತ್ನ ಆರೋಪಿಸಿ ಹಲ್ಲೆ ಪ್ರಕರಣದಲ್ಲಿ ಬೆಳ್ಳಾರೆ ಪೊಲೀಸರಿಂದ
ಆರು ಮಂದಿಯ ಬಂಧನವಾಗಿದೆ.

ಪುನೀತ್, ರಾಜು, ಕಿಶೋರ್, ಭವಿತ್, ರಂಜಿತ್ ಮತ್ತು ಪ್ರಸಾದ್ ಬಂಧಿತ ಆರೋಪಿಗಳಾಗಿದ್ದಾರೆ.

ಹಲ್ಲೆಗೊಳಗಾಗಿದ್ದ ಯುವಕರಾದ
ರಮೀಜುದ್ದಿನ್ ಮತ್ತು ಮಹಮ್ಮದ್ ರಫೀಕ್ ಬೆಳ್ಳಾರೆ ಠಾಣೆಗೆ ದೂರು ನೀಡಲ್ಪಟ್ಟಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರು ತಡೆದು ನಿಲ್ಲಿಸಿ ಹೊರಗೆಳೆದು
ದೊಣ್ಣೆ, ಕಬ್ಬಿಣದ ರಾಡ್ ಮತ್ತು ಕಾಲಿನಿಂದ ತುಳಿದು ರಸ್ತೆಯಲ್ಲಿ ಹಲ್ಲೆ ನಡೆಸಿದ್ದಲ್ಲದೇ ಕಾರು ಜಖಂ ಗೊಳಿಸಿದ ಬಗ್ಗೆ ದೂರು ಸಲ್ಲಿಸಲಾಗಿತ್ತು.

ಕಡಬ ತಾಲೂಕಿನ ಕಾಣಿಯೂರು ದೋಲ್ಪಾಡಿಯಲ್ಲಿ ಘಟನೆ ನಡೆದಿದ್ದು, ಕಂಬಳಿ ಮಾರುವ ನೆಪದಲ್ಲಿ ಕಾರಿನಲ್ಲಿ ಮನೆಯಂಗಳಕ್ಕೆ ಬಂದಿದ್ದ ಯುವಕರು ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದರು ಎಂದು ಆರೋಪಿಸಿ ಯುವಕರ ಮೇಲೆ‌ ಹಲ್ಲೆ ನಡೆದಿತ್ತು.

ಹಲ್ಲೆಯ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತಲ್ಲದೇ,
ಮಹಿಳೆ ನೀಡಿದ ದೂರಿನಂತೆ ಯುವಕರ ವಿರುದ್ದ ಅತ್ಯಾಚಾರ ಯತ್ನ ಪ್ರಕರಣ ದಾಖಲಾಗಿತ್ತು.
ಯುವಕರು ನೀಡಿದ ದೂರಿನಂತೆ ಬಂಧಿಸಲ್ಪಟ್ಟ ಯುವಕರ ವಿರುದ್ದವೂ ಎಫ್ಐಆರ್ ದಾಖಲಾಗಿತ್ತು.‌

- Advertisement -

Latest News

error: Content is protected !!