Tuesday, July 14, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಚಿನ್ನಯ್ಯ ಮತ್ತು ಪತ್ನಿಗೆ ಹಣ ವರ್ಗಾವಣೆ ಪ್ರಕರಣ; ಎಸ್.ಐ.ಟಿ ಯಿಂದ ತಿಮರೋಡಿ ಆಪ್ತ...

ಬೆಳ್ತಂಗಡಿ : ಚಿನ್ನಯ್ಯ ಮತ್ತು ಪತ್ನಿಗೆ ಹಣ ವರ್ಗಾವಣೆ ಪ್ರಕರಣ; ಎಸ್.ಐ.ಟಿ ಯಿಂದ ತಿಮರೋಡಿ ಆಪ್ತ ನಿತಿನ್@ನೀತು ಉಜಿರೆ ವಿಚಾರಣೆ

- Advertisement -
- Advertisement -

ಬೆಳ್ತಂಗಡಿ : ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ ಮತ್ತು ಆತನ ಪತ್ನಿ ಮಲ್ಲಿಕಾ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ ಪ್ರಕರಣ ಸಂಬಂಧ ಸೆ.22 ರಂದು ತಿಮರೋಡಿ ಮಹೇಶ್ ಶೆಟ್ಟಿಯ ಆಪ್ತರಲ್ಲಿ ಒಬ್ಬನಾದ, ಬೆಳ್ತಂಗಡಿ PWD ಯಲ್ಲಿ ಗುತ್ತಿಗೆದಾರ, ಉಜಿರೆ ನಿವಾಸಿ ನಿತಿನ್ ಯಾನೆ ನೀತು ಎಂಬಾತನನ್ನು ಎಸ್‌.ಐ.ಟಿ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದ್ದಾರೆ.

ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ ಬಗ್ಗೆ ಎಸ್.ಐ.ಟಿ ಬ್ಯಾಂಕ್ ದಾಖಲೆ ಮುಂದಿಟ್ಟು ವಿಚಾರಣೆ ಮಾಡಿದಾಗ ಹಣ ವರ್ಗಾವಣೆ ಮಾಡಿದ್ದನ್ನು ನಿತಿನ್@ನೀತು ಒಪ್ಪಿಕೊಂಡಿದ್ದು ಆತನ ಮೊಬೈಲ್ ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!