- Advertisement -
- Advertisement -
ಚಾರ್ಮಾಡಿ: ಚಿಕ್ಕಮಗಳೂರು- ಮಂಗಳೂರು ಹೆದ್ದಾರಿಯ ಚಾರ್ಮಾಡಿ ಘಾಟಿಯಲ್ಲಿ ಮಂಗಳವಾರ ಮಧ್ಯರಾತ್ರಿ ಒಂಟಿ ಸಲಗ ಪುಂಡಾಟ ಮೆರೆದಿದೆ. ಬೆಳ್ತಂಗಡಿ ತಾಲೂಕು ವ್ಯಾಪ್ತಿಯ 8ನೇ ತಿರುವಿನಲ್ಲಿ ಮಧ್ಯರಾತ್ರಿ 12 ಗಂಟೆ ಬಳಿಕ ಕಾಣ ಸಿಕ್ಕಿದ್ದು ವಾಹನ ಸವಾರರೊಬ್ಬರು ತಮ್ಮ ಮೊಬೈಲ್ ನಲ್ಲಿ ಆನೆ ಓಡಾಟವನ್ನು ಸರೆ ಹಿಡಿದಿದ್ದಾರೆ.
ಬಣಕಲ್ ಸಬ್ ಇನ್ಸ್ ಪೆಕ್ಟರ್ ಶ್ರೀನಾಥ್ ರೆಡ್ಡಿ ಮಾಹಿತಿ ಮೇರೆಗೆ ಬೆಳ್ತಂಗಡಿ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅನೆ ಓಡಿಸಲು ಹರ ಸಹಾಸ ಪಟ್ಟರು. ಒಂಟಿ ಸಲಗ ಅರಣ್ಯ ಸಿಬ್ಬಂದಿಯವರಿಗೂ ಬಗ್ಗದೆ ಮರಗಿಡ ತುಂಡರಿಸಿ ಪುಂಡಾಟ ನಡೆಸಿದೆ. ಕಾಡಿಗೆ ಓಡಿಸಲೂ ಬಾರಿ ಹರಸಹಾಸದ ಬಳಿಕ ಅರಣ್ಯವಾಪ್ತಿಯೊಳಗೆ ಸೇರಿದೆ.
ಸ್ಥಳಕ್ಕೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಉಪ ವಲಯ ಅರಣ್ಯ ಅಧಿಕಾರಿಗಳಾದ ಉಲ್ಲಾಸ್, ವಿನೋದ್, ಅರಣ್ಯ ರಕ್ಷಕರಾದ ರಾಘವೇಂದ್ರ, ಪ್ರಸಾದ್, ಮೋಹಿತ್, ಸದಾಶಿವ ಶಿಂದಿಗಾರ್ ಭೇಟಿ ನೀಡಿ ಸಲಗವನ್ನು ಕಾಡಿಗಟ್ಟಿದ್ದಾರೆ.
- Advertisement -