- Advertisement -
- Advertisement -
ಬಂಟ್ವಾಳ: ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಮದ್ಯದಂಗಡಿಗಳೆಲ್ಲಾ ಬಂದ್ ಆಗಿದ್ದು, ಅದೆಷ್ಟೋ ಮದ್ಯ ವ್ಯಸನಿಗಳು ಮದ್ಯಪಾನ ಮಾಡದೆ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಈ ನಡುವೆಯೇ ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟು ಎಂಬಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಬಂಟ್ವಾಳ ನಗರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ.
ಅಗ್ರಾರ್ ಕೊಡಿ ನಿವಾಸಿಗಳಾದ ಅಲ್ಸ್ಟರ್ ಪಿಂಟೋ ಮತ್ತು ರೋಶನ್ ಫರ್ನಾಂಡಿಸ್ ಇಬ್ಬರನ್ನು ಬಂಧಿಸಿ ಸಾರಾಯಿ ತಯಾರಿಸಲು ಬಳಸಿರುವ ಸಾಮಾಗ್ರಿಗಳು, ಸ್ಕೂಟರ್ ಸಮೇತ 20 ಲೀಟರ್ ಕಳ್ಳಬಟ್ಟಿ ಸಾರಾಯಿಯನ್ನು ವಶಕ್ಕೆ ಪಡೆಯಲಾಗಿದೆ.
ಬಂಟ್ವಾಳ ವೃತ್ತ ನಿರಕ್ಷಕ ಟಿ. ಡಿ. ನಾಗರಾಜ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಪರಾಧ ಪತ್ತೆ ದಳದ ಪಿಎಸ್ಐ ಕುಮಾರ್ ಕಾಂಬ್ಳೆ, ಪಿಎಸ್ಐ ಅವಿನಾಶ್ ಗೌಡ ಭಾಗವಹಿಸಿದ್ದರು.
- Advertisement -
