Wednesday, June 3, 2026
Homeಕರಾವಳಿಮಂಗಳೂರಿಗೆ ಮೋದಿ‌ ಆಗಮನ ಹಿನ್ನೆಲೆ: ಸರಣಿ‌ ಟ್ವೀಟ್ ಗಳ ಮೂಲಕ ಪ್ರಧಾನಿಗಳನ್ನು ಪ್ರಶ್ನಿಸಿದ ಮಾಜಿ ಸಿಎಂ...

ಮಂಗಳೂರಿಗೆ ಮೋದಿ‌ ಆಗಮನ ಹಿನ್ನೆಲೆ: ಸರಣಿ‌ ಟ್ವೀಟ್ ಗಳ ಮೂಲಕ ಪ್ರಧಾನಿಗಳನ್ನು ಪ್ರಶ್ನಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

- Advertisement -
- Advertisement -

ಮಂಗಳೂರು;  ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳೂರಿಗೆ ಆಗಮಿಸುತ್ತಿರುವ ಬೆನ್ನಲ್ಲೆ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇದು ವಿಕಾಸವೋ? ವಿನಾಶವೋ ? ಪ್ರಶ್ನಿಸುವ ಮೂಲಕ ಸರಣಿ ಟ್ವೀಟ್‌ ಮಾಡಿದ್ದಾರೆ

ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗೆ ಬರುತ್ತಿರುವ ಮೋದಿಯವರಿಗೆ ಇದು ವಿಕಾಸವೋ? ವಿನಾಶವೋ ಎಂಬ ಶೀರ್ಷಿಕೆ ಮೂಲಕ ಪ್ರಶ್ನೆಗಳನ್ನು ಸಿದ್ದರಾಮಯ್ಯ ಇಟ್ಟಿದ್ದಾರೆ. ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮಂಗಳೂರಿಗೆ ಸ್ವಾಗತ. ನಿಮ್ಮ ವಿಕಾಸ ದರ್ಶನಕ್ಕೋ, ವಿನಾಶ ದರ್ಶನಕ್ಕೋ?

ನಿಮ್ಮ ಇಂದಿನ ಭಾಷಣದಲ್ಲಿ ಈ ಪ್ರಶ್ನೆಗೆ ಉತ್ತರ ಕೊಡಬೇಕೆಂದು ವಿನಯಪೂರ್ವಕ ಮನವಿ ಮಾಡುತ್ತೇವೆ. ದಕ್ಷಿಣ ಕನ್ನಡದ ಉದ್ಯಮಶೀಲ ಹಿರಿಯರು ಸಿಂಡಿಕೇಟ್, ಕಾರ್ಪೋರೇಷನ್, ವಿಜಯಾ, ಕೆನರಾ ಮತ್ತು ಕರ್ನಾಟಕ ಹೀಗೆ ಐದು ಬ್ಯಾಂಕ್ ಗಳನ್ನು ಹುಟ್ಟುಹಾಕಿದ್ದರು. ನೀವು ಇವುಗಳಲ್ಲಿ ಮೂರು ಬ್ಯಾಂಕುಗಳ ನಾಮಾವಶೇಷ ಮಾಡಿದ್ದೀರಿ ಇದು ವಿಕಾಸವೋ? ವಿನಾಶವೋ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

- Advertisement -

Latest News

error: Content is protected !!