Tuesday, May 14, 2024
Homeಕರಾವಳಿಸಿದ್ದರಾಮಯ್ಯ ಬೆಳ್ತಂಗಡಿಗೆ ಬರುವ ಮುಖ್ಯ ಉದ್ದೇಶ ಪುಸ್ತಕ ಬಿಡುಗಡೆ: ಇದರಲ್ಲಿ ರಾಜಕೀಯ ಮಾಡುವುದು ಹಿತವಲ್ಲ :...

ಸಿದ್ದರಾಮಯ್ಯ ಬೆಳ್ತಂಗಡಿಗೆ ಬರುವ ಮುಖ್ಯ ಉದ್ದೇಶ ಪುಸ್ತಕ ಬಿಡುಗಡೆ: ಇದರಲ್ಲಿ ರಾಜಕೀಯ ಮಾಡುವುದು ಹಿತವಲ್ಲ : ದೇವಿಪ್ರಸಾದ್

spot_img
- Advertisement -
- Advertisement -

ಬೆಳ್ತಂಗಡಿ: ಜೈ ಪ್ರಕಾಶನ ಸಂಸ್ಥೆ , ಶ್ರೀ ಮಂಜುನಾಥ ಕೃಪಾ ಬೆಳ್ತಂಗಡಿ ಇದರ ವತಿಯಿಂದ ಬಿಡುಗಡೆಯಾಗುತ್ತಿರುವ ಮಾಜಿ ಶಾಸಕ ಕೆ.ವಸಂತ ಬಂಗೇರರ ವ್ಯಕ್ತಿತ್ವ ಚಿತ್ರಣ ‘ವಸಂತ ವಿನ್ಯಾಸ’ ಪುಸ್ತಕದ ಅನಾವರಣ ಕಾರ್ಯಕ್ರಮವನ್ನು ಡಿಸೆಂಬರ್ 17ರಂದು ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯನವರು ನೆರವೇರಿಸಲಿದ್ದಾರೆ. ಅದಲ್ಲದೆ ಸಾಹಿತ್ಯದ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದು ಇದು ಅವರಿಗೆ ಹಿತವಲ್ಲ ಎಂದು ನೋವಿನಿಂದ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ದೇವಿ ಪ್ರಸಾದ್ ಸುದ್ದಿಗೋಷ್ಠಿ ನಡೆಸಿ ಹೇಳಿದರು.

ಡಿಸೆಂಬರ್ 14 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿ ಮಾಜಿ ಶಾಸಕ ವೈ.ಎಸ್.ವಿ. ದತ್ತ ಪುಸ್ತಕ ಪರಿಚಯವನ್ನು ಮಾಡಲಿದ್ದು, ಮುಖ್ಯ ಅಭ್ಯಾಗತರಾಗಿ ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಮ ಪೂಜಾರಿ ಭಾಗವಹಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಶ್ರೀಮತಿ ರಾಜೇಶ್ವರಿ ಚೇತನ್ ಶುಭಾಶಂಸನೆ ಹಾಗೂ ಲೇಖಕ ಅರವಿಂದ ಚೊಕ್ಕಾಡಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದು ತಿಳಿಸಿದರು. ಸಿದ್ಧರಾಮಯ್ಯ ಅವರು ಸುಮಾರು ಬೆಳಗ್ಗೆ 11:30 ಕ್ಕೆ ಬೆಳ್ತಂಗಡಿಗೆ ಬರುವ ನಿರೀಕ್ಷೆ ಇದೆ. ಇದೊಂದು ಸಾಹಿತ್ಯಕ ಕಾರ್ಯಕ್ರವಾಗಿದ್ದು, ವಸಂತ ಬಂಗೇರರ ಬದುಕಿನ ಬಗ್ಗೆ ಬರುವ ಪ್ರಥಮ ಪುಸ್ತಕವಾಗಿದೆ. ಸಿದ್ಧರಾಮಯ್ಯ ಅವರು ಬಂಗೇರರ ಆತ್ಮೀಯ ಸ್ನೇಹಿತರು ಅದಕ್ಕಾಗಿ ಇದೊಂದು ಪ್ರಮುಖ ಕಾರ್ಯಕ್ರಮ ಸಿದ್ಧರಾಮಯ್ಯ ಅವರು ‘ವಸಂತ ವಿನ್ಯಾಸ ಪುಸ್ತಕ’ ಬಿಡುಗಡೆಗೆಂದೇ ಬೆಳ್ತಂಗಡಿಗೆ ಬರುತ್ತಿದ್ದಾರೆ. ಸುಮಾರು ಎರಡು ಸಾವಿರಕ್ಕೂ ಮಿಕ್ಕಿ ಸಾಹಿತ್ಯಾಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಂದವರಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಗುರುದೇವ ಕಾಲೇಜಿನ ವಠಾರದಲ್ಲಿ ಮಾಡಲಾಗಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಬೆಳ್ತಂಗಡಿಗೆ ಬರುವ ಮುಖ್ಯ ಕಾರ್ಯಕ್ರಮವೇ ಪುಸ್ತಕ ಬಿಡುಗಡೆ: ಮಾಜಿ ಕಾಂಗ್ರೆಸ್ ನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬೆಳ್ತಂಗಡಿಗೆ ಬರುತ್ತಿರುವ ಮುಖ್ಯ ಕಾರ್ಯಕ್ರಮ ಪುಸ್ತಕ ಬಿಡುಗಡೆಯಾಗಿದ್ದು. ಇದು ಸಾಹಿತ್ಯಿಕ ಕಾರ್ಯಕ್ರಮ ರಾಜಕೀಯ ಕಾರ್ಯಕ್ರಮವಲ್ಲ, ಆದರೆ ಕೆಲವರು ಫೆಕ್ಸ್, ಬ್ಯಾನರ್, ಆಮಂತ್ರಣ ಪತ್ರಿಕೆಗಳಲ್ಲಿ ಪುಸ್ತಕ ಬಿಡುಗಡೆ ಕಾರ್ಯಕರ್ತ ಕೂಡ ಅಲ್ಲಿ ನಡೆಯಲಿದೆ ಎಂದು ಹಾಕುತ್ತಿರುವುದು ಸರಿಯಲ್ಲ. ಈ ಕಾರ್ಯಕ್ರಮಕ್ಕೂ ಪ್ರಸನ್ನ ಕಾಲೇಜಿನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ಈ ಕಾರ್ಯಕ್ರಮವನ್ನು ಕೆಡಿಸುವ ಕಾರ್ಯ ಮಾಡುವುದು ಅವರಿಗೆ ಹಿತವಲ್ಲ, ಇದನ್ನು ನೋವಿನಿಂದ ಹೇಳುತ್ತಿದ್ದೇನೆ ಎಂದು ಜೈ ಪ್ರಕಾಶನದ ದೇವಿ ಪ್ರಸಾದ್ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಹೆಗ್ಡೆ ಹಟ್ಟಾಜೆ, ಸಂಚಾಲಕರುಗಳಾದ ಜನಾರ್ದನ ಬಂಗೇರ ಮೂಡಾಯಿಗುತ್ತು, ಚಿದಾನಂದ ಪೂಜಾರಿ ಏಲ್ಯಡ್ಕ, ವಕೀಲರಾದ ಭಗೀರಥ ಜಿ, ವಸಂತ ಬಿ.ಕೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು

- Advertisement -
spot_img

Latest News

error: Content is protected !!