Sunday, June 7, 2026
Homeರಾಜಕೀಯಸಿದ್ದರಾಮಯ್ಯ ಅವರು ದಿನದಿಂದ ದಿನಕ್ಕೆ ಹತಾಶೆಯ ಮಡುವಿಗೆ ಜಾರುತ್ತಿದ್ದಾರೆ ಎಂಬುದಕ್ಕೆ ಅವರ ಮಾತುಗಳೇ ಸಾಕ್ಷಿ: ಬಿಜೆಪಿ...

ಸಿದ್ದರಾಮಯ್ಯ ಅವರು ದಿನದಿಂದ ದಿನಕ್ಕೆ ಹತಾಶೆಯ ಮಡುವಿಗೆ ಜಾರುತ್ತಿದ್ದಾರೆ ಎಂಬುದಕ್ಕೆ ಅವರ ಮಾತುಗಳೇ ಸಾಕ್ಷಿ: ಬಿಜೆಪಿ ಟ್ವೀಟ್

- Advertisement -
- Advertisement -

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದಿನದಿಂದ ದಿನಕ್ಕೆ ಹತಾಶೆಯ ಮಡುವಿಗೆ ಜಾರುತ್ತಿದ್ದಾರೆ ಎಂಬುದಕ್ಕೆ ಅವರ ಮಾತುಗಳೇ ಸಾಕ್ಷಿ. ಬಜೆಟ್ ಬಗ್ಗೆ ಸಿದ್ಧರಾಮಯ್ಯ ಆಡಿದ ಮಾತು ಅವರ ಘನತೆಗೆ ತಕ್ಕದಲ್ಲ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ರಾಜಕೀಯ ಟೀಕೆಗಳು ಮರ್ಯಾದೆಯ ಗೆರೆ ದಾಟಬಾರದು. ಆದರೆ ಸಿದ್ದರಾಮಯ್ಯ ಅವರು ರಾಜ್ಯದ ಆಯವ್ಯಯವನ್ನೇ ಅಡ್ಡಕಸುಬಿ ಬಜೆಟ್‌ ಎಂದು ವ್ಯಾಖ್ಯಾನಿಸಿದ್ದಾರೆ. ಪ್ರಜಾಪ್ರಭುತ್ವದ ರೀತಿ ರಿವಾಜುಗಳಿಗೆ ವಿರುದ್ಧವಾದ ಹೇಳಿಕೆಯನ್ನು ಸಿದ್ದರಾಮಯ್ಯರಿಂದ ರಾಜ್ಯದ ಜನರು ನಿರೀಕ್ಷಿಸಿರಲಿಲ್ಲ.ಇದು ರಾಜ್ಯದ ಜನತೆಗೆ ಮಾಡಿದ ಅವಮಾನ ಎಂದಿದೆ.

ಇನ್ನು ಸಿದ್ದರಾಮಯ್ಯ ಅವರು ದಿನದಿಂದ ದಿನಕ್ಕೆ ಹತಾಶೆಯ ಮಡುವಿಗೆ ಜಾರುತ್ತಿದ್ದಾರೆ ಎಂಬುದಕ್ಕೆ ಅವರ ಮಾತುಗಳೇ ಸಾಕ್ಷಿ. ಬಜೆಟ್ ಬಗ್ಗೆ ಸಿದ್ದರಾಮಯ್ಯ ಆಡಿದ ಮಾತು ಅವರ ಘನತೆಗೆ ತಕ್ಕದಲ್ಲ. ಸಿದ್ದರಾಮಯ್ಯನವರು ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ “ಅಡ್ಡಕಸುಬಿ” ಎಂದು ಯಾರಾದರೂ ಕರೆದರೆ, ನಿಮಗೆ ನೋವಾಗಬಹುದೇ? ಎಂದು ಬಿಜೆಪಿ ಪ್ರಶ್ನಿಸಿದೆ.

‌ಮಾನ್ಯ ಡಿ.ಕೆ.ಶಿವಕುಮಾರ್ ಅವರೇ,ನಿಮ್ಮ ರಾಜಕೀಯ ಪ್ರೇರಿತ ಗೊಡ್ಡು ಪಾದಯಾತ್ರೆಗೆ ಬೆದರಿ ಬಜೆಟ್‌ನಲ್ಲಿ ಮೇಕೆದಾಟು ಯೋಜನೆಗೆ ಹಣ ಮೀಸಲಿರಿಸಿದ್ದಲ್ಲ. ಮೇಕೆದಾಟು ಯೋಜನೆ ಅನುಷ್ಠಾನ ನಮ್ಮ ಬದ್ಧತೆ, ಅದಕ್ಕಾಗಿ ಹಣ ಮೀಸಲಿರಿಸಿದ್ದೇವೆ. ನಿಮ್ಮಿಂದ ಇದು ಸಾಧ್ಯವಾಗಿಲ್ಲ ಎಂಬುದಕ್ಕಾಗಿ ನೀವು ನಾಚಿಗೆ ಪಟ್ಟುಕೊಳ್ಳಬೇಕು ಎಂದು ಟೀಕಿಸಿದೆ.

- Advertisement -

Latest News

error: Content is protected !!