Friday, June 5, 2026
Homeತಾಜಾ ಸುದ್ದಿ'ಸ್ಲಂ ಬಾಲ' ಚಿತ್ರದ ಸಮಯದಲ್ಲಿನ ಫೋಟೋ ಹಂಚಿಕೊಂಡ ನಟಿ ಶುಭಾ ಪೂಂಜಾ

‘ಸ್ಲಂ ಬಾಲ’ ಚಿತ್ರದ ಸಮಯದಲ್ಲಿನ ಫೋಟೋ ಹಂಚಿಕೊಂಡ ನಟಿ ಶುಭಾ ಪೂಂಜಾ

- Advertisement -
- Advertisement -

ಬೆಂಗಳೂರು: ನಟಿ ಶುಭಾ ಪೂಂಜಾ ʼಸ್ಲಂ ಬಾಲʼ ಚಿತ್ರದಲ್ಲಿ ನಟಿಸುವ ಸಮಯದಲ್ಲಿನ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ದರು.

ʼನನ್ನ ಚಲನಚಿತ್ರ ಸ್ಲಂ ಬಾಲಾ ಸಮಯದಲ್ಲಿ ತೆಗೆದ ಚಿತ್ರಗಳು..ಕೆ ನಾಗೇಶ್ ಕುಮಾರ್ ಚಿತ್ರೀಕರಿಸಿದ್ದಾರೆ. ನಾನು ಎಷ್ಟು ಸ್ಲಿಮ್ ಆಗಿದ್ದೇನೆ ಎಂದು ಆಶ್ಚರ್ಯವಾಗುತ್ತಿದೆʼ ಎಂದು ಶುಭ ಪೂಂಜಾ ಬರೆದುಕೊಂಡಿದ್ದು, ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.

ನಟಿ ಶುಭಾ ಪೂಂಜಾ ಲಾಕ್ ಡೌನ್ ಟೈಮ್‌ನಲ್ಲಿ ಗಿಡ ನೆಟ್ಟು, ಇನ್ನಿತರ ಕೆಲಸಗಳಲ್ಲಿ ಸಮಯ ಕಳೆದಿದ್ದಾರೆ. ಕೆಲಸದ ನಿಮಿತ್ತ ಅವರು ಮತ್ತೆ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರ ‘ತ್ರಿದೇವಿ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಆಗಿ ಇದು ಅವರ ಮೊದಲ ಚಿತ್ರವಾಗಿದೆ. ನಟಿ ಶುಭಾ ಪೂಂಜಾ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಅವರ ನಟನೆಯ ಹೊಸ ಚಿತ್ರದ ಹೆಸರು ‘ಅಂಬುಜ’

- Advertisement -

Latest News

error: Content is protected !!