Saturday, May 4, 2024
Homeತಾಜಾ ಸುದ್ದಿಕ್ಯಾಲಿಕಟ್ ವಿಮಾನ ಅಪಘಾತ ಪ್ರಕರಣ: ಇಬ್ಬರು ಪ್ರಯಾಣಿಕರಿಗೆ ಕೊರೊನಾ!

ಕ್ಯಾಲಿಕಟ್ ವಿಮಾನ ಅಪಘಾತ ಪ್ರಕರಣ: ಇಬ್ಬರು ಪ್ರಯಾಣಿಕರಿಗೆ ಕೊರೊನಾ!

spot_img
- Advertisement -
- Advertisement -

ಕ್ಯಾಲಿಕಟ್: ಶುಕ್ರವಾರ ರಾತ್ರಿ ದುಬೈನಿಂದ ಕೇರಳದ ಕ್ಯಾಲಿಕಟ್‌ಗೆ ಬರುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಪತನಗೊಂಡಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಅದ್ರಲ್ಲಿ 45 ವರ್ಷದ ಸುದೀರ್ ಎಂಬಾತ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಈ ವಿಚಾರವನ್ನು ಕೇರಳ ಸಚಿವ ಕೆಟಿ ಜಲೀಲ್ ಹೇಳಿದ್ದಾರೆ.

ಪ್ರಯಾಣಿಕರನ್ನು ಬೇರೆ ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರಿಗೂ ಕೊರೊನಾ ಪರೀಕ್ಷೆ ನಡೆಯುತ್ತಿದೆ. ಕೊರೊನಾ ಪ್ರೋಟೋಕಾಲ್ ಅಡಿಯಲ್ಲಿ ಶವಗಳ ಅಂತ್ಯಕ್ರಿಯೆ ನಡೆಯಲಿದೆ.

ಈ ಹಿನ್ನೆಲೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತದ ರಕ್ಷಣಾ ಕಾರ್ಯಾಚರಣೆಯಲ್ಲಿ ಬದುಕಿಳಿದವರೆಲ್ಲರೂ ಕ್ವಾರಂಟೈನ್‌ಗೆ ಹೋಗಬೇಕು. ಮತ್ತು ಎಲ್ಲರಿಗೂ ಕೊರೊನಾ ಪರೀಕ್ಷೆ ಕಡ್ಡಾಯ ಎಂದು ಕೇರಳ ಆರೋಗ್ಯ ಸಚಿವೆ ಶೈಲಜಾ ಟೀಚರ್ ಹೇಳಿದ್ದಾರೆ.

ಇಬ್ಬರು ಪೈಲೆಟ್ ಹಾಗೂ ನಾಲ್ಕು ಸಿಬ್ಬಂದಿ ಒಟ್ಟು 191 ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು. ಗಾಯಗೊಂಡ 149 ಪ್ರಯಾಣಿಕರನ್ನು ಮಲಪ್ಪುರಂ ಮತ್ತು ಕೋಳಿಕ್ಕೋಡ್ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಅದರಲ್ಲಿ 22 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಪ್ರಥಮ ಚಿಕಿತ್ಸಾ ನಂತರ 22 ಜನರನ್ನು ಬಿಡುಗಡೆ ಮಾಡಲಾಗಿದೆ.

- Advertisement -
spot_img

Latest News

error: Content is protected !!