Wednesday, June 3, 2026
Homeಕರಾವಳಿಉಡುಪಿಉಡುಪಿಯ ರಂಗಭೂಮಿ ಹಿರಿಯ ಸಂಗೀತ ನಿರ್ದೇಶಕ ಶ್ರೀ ಕೆ.ರಾಘವೇಂದ್ರ ಭಟ್ ಇಂದು ನಿಧನ !

ಉಡುಪಿಯ ರಂಗಭೂಮಿ ಹಿರಿಯ ಸಂಗೀತ ನಿರ್ದೇಶಕ ಶ್ರೀ ಕೆ.ರಾಘವೇಂದ್ರ ಭಟ್ ಇಂದು ನಿಧನ !

- Advertisement -
- Advertisement -

ರಂಗಭೂಮಿಯ ಹಿರಿಯ ಸಂಗೀತ ನಿರ್ದೇಶಕ ಶ್ರೀ ಕೆ.ರಾಘವೇಂದ್ರ ಭಟ್ ಇಂದು ತಮ್ಮ ನಿವಾಸದಲ್ಲಿ ವಯೋಸಹಜ ಅಸೌಖ್ಯದಿಂದ ವಿಧಿವಶರಾಗಿದ್ದಾರೆ.

ಅದೆಷ್ಟೋ ಶಾಲಾ ಕಾಲೇಜುಗಳಲ್ಲಿ ನಡೆಯುವ ನಾಟಕ, ನೃತ್ಯ, ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿ, ಕೀ ಬೋರ್ಡ್ ನುಡಿಸಿ ಪ್ರಶಂಸೆಗೆ ಪಾತ್ರರಾಗಿದ್ದರು.

ರಂಗಭೂಮಿ (ರಿ.) ಉಡುಪಿ ತಂಡದ ಬಹಳಷ್ಟು ನಾಟಕಗಳಿಗೆ ಸಂಗೀತ ನಿರ್ದೇಶಕರಾಗಿ ಇವರು ಸೇವೆಯನ್ನು ಸಲ್ಲಿಸಿದ್ದರು. ಹಿಂದೆ ಉಡುಪಿಯ ಪರಿಸರದಲ್ಲಿ ಪ್ರಖ್ಯಾತಿಗಳಿಸಿದ್ದ “ರಂಗಭೂಮಿ” ಆರ್ಕೆಸ್ಟ್ರಾ ತಂಡವನ್ನು ಇವರು ಮುನ್ನಡೆಸಿದ್ದರು.

- Advertisement -

Latest News

error: Content is protected !!