Monday, April 29, 2024
Homeತಾಜಾ ಸುದ್ದಿಶ್ರೀನಗರ: ಸುಧಾರಿತ ಸ್ಫೋಟಕ ಸ್ಫೋಟಗೊಂಡು ಯೋಧ ಹುತಾತ್ಮ!..

ಶ್ರೀನಗರ: ಸುಧಾರಿತ ಸ್ಫೋಟಕ ಸ್ಫೋಟಗೊಂಡು ಯೋಧ ಹುತಾತ್ಮ!..

spot_img
- Advertisement -
- Advertisement -

ಶ್ರೀನಗರ: ಶಾಲೆಯೊಳಗೆ ಉಗ್ರರು ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕವು(ಐಇಡಿ) ಸ್ಫೋಟಗೊಂಡು ಯೋಧರೊಬ್ಬರು ಹುತಾತ್ಮರಾಗಿದ್ದಾರೆ.ಘಟನೆಯಲ್ಲಿ ಮೂವರು ಯೋಧರು ಗಾಯಗೊಂಡ ಘಟನೆ ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಶಮ್ಸಿಪೊರಾದಲ್ಲಿ ಬುಧವಾರ ನಡೆದಿದೆ.

ಸ್ಫೋಟ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯ ಶುಭನ್‌ಪೊರಾ ಪ್ರದೇಶದಲ್ಲಿ ನಡೆದಿದ್ದು ಸೇನೆಯ 24ನೇ ರಾಷ್ಟ್ರೀಯ ರೈಫಲ್ಸ್‌ನ ‘ರೋಡ್‌ ಓಪನಿಂಗ್‌ ಪಾರ್ಟಿ’ಯ(ಆರ್‌ಒಪಿ) ನಾಲ್ವರು ಯೋಧರು ಪ್ರಯಾಣಿಸುತ್ತಿದ್ದ ವೇಳೆ ಐಇಡಿ ಸ್ಫೋಟಗೊಂಡಿದೆ. ಗಾಯಗೊಂಡ ನಾಲ್ವರು ಯೋಧರನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ, ಒಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಹುತಾತ್ಮರಾಗಿದ್ದಾರೆ.

- Advertisement -
spot_img

Latest News

error: Content is protected !!