Sunday, June 29, 2025
Homeತಾಜಾ ಸುದ್ದಿಬೆಂಗಳೂರಿನ ಪ್ರತಿಷ್ಟಿತ ಹೋಟೆಲ್ ನಲ್ಲಿ ಡ್ರಗ್ಸ್ ಪಾರ್ಟಿ:   ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರನ ಬಂಧನ

ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್ ನಲ್ಲಿ ಡ್ರಗ್ಸ್ ಪಾರ್ಟಿ:   ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರನ ಬಂಧನ

spot_img
- Advertisement -
- Advertisement -

ಬೆಂಗಳೂರು:  ನಗರದ ಎಂ.ಜಿ ರಸ್ತೆಯ ಟ್ರಿನಿಟಿ ಸರ್ಕಲ್‍ನಲ್ಲಿ ಪ್ರತಿಷ್ಠಿತ 5 ಸ್ಟಾರ್ ದಿ ಪಾರ್ಕ್ ಹೋಟೆಲ್ನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ಹಲಸೂರು ಪೊಲೀಸರು ದಾಳಿ ಮಾಡಿದ್ದಾರೆ. ಪಾರ್ಟಿಯಲ್ಲಿ ತೊಡಗಿದ್ದ ಯುವಕ ಯುವತಿ ಸೇರಿ ಒಟ್ಟು 50 ಜನರನ್ನ ವಶಕ್ಕೆ ಪಡೆದಿದ್ದರು. ಈ ಗುಂಪಿನಲ್ಲಿದ್ದ 35 ಜನರಿಗೆ ಮೆಡಿಕಲ್ ಟೆಸ್ಟ್ ಮಾಡಿಸಿದ್ದು, ಐವರು ಮಾದಕವಸ್ತು ಸೇವನೆ ಮಾಡಿರೋದು ದೃಢವಾಗಿದೆ. ಈ ಗುಂಪಿನಲ್ಲಿ ಸಿದ್ಧಾಂತ್ ಕಪೂರ್ ಸಹ ಇರುವುದು ಖಚಿತವಾಗಿದ್ದು, ಸಿದ್ಧಾಂತ್‌ ಕಪೂರ್ ನನ್ನು ಪೊಲೀಸರು ಬಂಧಿಸಿದ್ದಾರೆ

ಸಿದ್ಧಾಂತ್  ಹೋಟೆಲ್‍ನಲ್ಲಿ ಡಿಜೆ ಪ್ಲೈಯರ್ ಆಗಿದ್ದು, ಡ್ರಗ್ಸ್ ಸೇವನೆ ಮಾಡಿರೋದು ದೃಢವಾಗಿದೆ. ಸಿದ್ಧಾಂತ್ ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಪುತ್ರ, ಶ್ರದ್ಧಾ ಕಪೂರ್ ಸಹೋದರ. ಅಖಿಲ್ ಸೋನಿ, ಅಜೋದ್ ಸಿಂಗ್ ಪಂಜಾಬ್, ಅಖೀಲ್, ಅನಿ, ದರ್ಶನ್ ಸುರೇಶ್ ಬಂಧಿತ ಆರೋಪಿಗಳು. ಆರೋಪಿಗಳೆಲ್ಲರೂ ಟೆಕ್ಕಿಗಳಾಗಿದ್ದು, ರಾತ್ರಿ ಪಾರ್ಟಿ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಸ್ಪಷ್ಟನೆ ಕೊಟ್ಟಿದ್ದಾರೆ.

- Advertisement -
spot_img

Latest News

error: Content is protected !!