Thursday, June 25, 2026
Homeಕೊಡಗುಕೊಡಗಿನಲ್ಲಿ ಕೋಲದ ವೇಳೆ ಗಲಾಟೆ, ಮೂವರಿಗೆ ಗುಂಡೇಟು

ಕೊಡಗಿನಲ್ಲಿ ಕೋಲದ ವೇಳೆ ಗಲಾಟೆ, ಮೂವರಿಗೆ ಗುಂಡೇಟು

- Advertisement -
- Advertisement -

ಕೊಡಗು ಕುಟುಂಸ್ಥರೆಲ್ಲಾ ಸೇರಿ ಭೂತ ಕೋಲದಲ್ಲಿ ಭಾಗಿಯಾಗಿದ್ದಾಗ ಗಲಾಟೆ ನಡೆದು ಮೂವರಿಗೆ ಗುಂಡೇಟು ತಗುಲಿರುವ ಘಟನೆ ಸೋಮವಾರಪೇಟೆ ತಾಲೂಕಿನ ನಗರಳ್ಳಿ ಗ್ರಾಮದಲ್ಲಿ ನಡೆದಿದೆ.

ನಗರಳ್ಳಿ ಗ್ರಾಮದಲ್ಲಿ 12 ವರ್ಷಗಳ ಬಳಿಕ ಗ್ರಾಮದಲ್ಲಿ ಈ ಪೂಜೆ ಆಯೋಜಿಸಲಾಗಿತ್ತು. ಪೂಜೆಯ ವೇಳೆ ನಡೆದ ಗಲಾಟೆಯಲ್ಲಿ ಕೆಲವರು ವೀರೇಶ್ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಆಗ ವೀರೇಶ್‌ ಹಾರಿಸಿದ ಗುಂಡೇಟಿಗೆ ಕುಟುಂಬ ಮಹೇಶ್, ನಂದೀಶ್, ಚಂದ್ರಶೇಖರ್ ಗಾಯಗೊಂಡಿದ್ದಾರೆ.

ಮಹೇಶ್ ಅವರಿಗೆ ಸೊಂಟದ ಕೆಳಭಾಗಕ್ಕೆ ಗುಂಡೇಟು ತಗುಲಿದೆ. ಮತ್ತಿಬ್ಬರ ಕೈಗೆ ಗುಂಡೇಟು ತಗುಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿಯ ಮೇಲೂ ಹಲ್ಲೆಯ ಗಾಯಗಳಾಗಿವೆ. ಗುಂಡೇಟು ತಗುಲಿದ ಮೂವರನ್ನೂ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಹಣದ ವಿಚಾರದಲ್ಲಿ ವೀರೇಶ್‌ ಮತ್ತಿತರ ನಡುವೆ ನಡುವೆ ಗಲಾಟೆ ನಡೆದಿದ್ದು ಘಟನೆಗೆ ಕಾರಣವಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ವೀರೇಶ್ ಏಕಾಏಕಿ ರಿವಾಲ್ವರ್‌ನಿಂದ ಗುಂಡು ಹಾರಿಸಿದರು ಎಂದು ಗಾಯಾಳು ಚಂದ್ರಶೇಖರ್ ಆರೋಪಿಸಿದ್ದಾರೆ. ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!