Friday, June 27, 2025
Homeತಾಜಾ ಸುದ್ದಿಸಪ್ಟಂಬರ್ ವೇಳೆಗೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 35 ಲಕ್ಷಕ್ಕೆ ಏರಿಕೆ ಸಾಧ್ಯತೆ, ಐಐಎಸ್ ಸಿಯಿಂದ...

ಸಪ್ಟಂಬರ್ ವೇಳೆಗೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 35 ಲಕ್ಷಕ್ಕೆ ಏರಿಕೆ ಸಾಧ್ಯತೆ, ಐಐಎಸ್ ಸಿಯಿಂದ ಆಘಾತಕಾರಿ ಮಾಹಿತಿ

spot_img
- Advertisement -
- Advertisement -

ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ವೇಗವನ್ನು ನೋಡಿದ್ರೆ ಇದು ಎಲ್ಲಿಗೆ ಹೋಗಿ ಮುಟ್ಟುತ್ತೆ ಅನ್ನೋ ಆತಂಕ ಶುರುವಾಗುತ್ತೆ. ಅದರಲ್ಲೂ ಕಳೆದ ಒಂದು ತಿಂಗಳಲ್ಲಿ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ. ಜೊತೆಗೆ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಲೆ ಇದೆ.

ಹೀಗಿರುವಾಗಲೇ ಇದೀಗ ದೇಶದ ಜನರು ಬೆಚ್ಚಿ ಬೀಳುವಂತಹ ಆಘಾತಕಾರಿ ಸಂಗತಿಯೊಂದನ್ನು ಹೇಳಿದೆ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ . ಹೌದು ಐಐಎಸ್ ಸಿ ಸದ್ಯ ನೀಡಿರುವ ಮಾಹಿತಿಯೊಂದು ಬಿಚ್ಚಿ ಬೀಳಿಸುಂವತಿದೆ. ಇದರ ಪ್ರಕಾರ ಭಾರತದಲ್ಲಿ ಸಪ್ಟಂಬರ್ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ 35 ಲಕ್ಷಕ್ಕೆ ತಲುಪಲಿದೆಯಂತೆ. ಅಲ್ಲದೇ ಆಗಸ್ಟ್ ನಲ್ಲಿ ದೇಶದಲ್ಲಿ 10 ಲಕ್ಷ ಸಕ್ರೀಯ ಕೊರೊನಾ ಪ್ರಕರಣಗಳು ಇರಲಿವೆ ಎಂದು ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಅಧ್ಯಯನ ನಡೆಸಿ ಮಾಹಿತಿ ನೀಡಿದೆ.

ಹಾಗೇ ರಾಜ್ಯದ ವಿಚಾರಕ್ಕೆ ಸಂಬಂಧಪಟ್ಟಂತೆಯೂ ಕೂಡ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಬೆಚ್ಚಿ ಬೀಳಿಸುವಂತಹ ಸತ್ಯವನ್ನೇ ಹೇಳಿದೆ. ಅದೇನಪ್ಪಾ ಅಂದ್ರೆ ರಾಜ್ಯದಲ್ಲೂ ಕೂಡ ಸಪ್ಟಂಬರ್ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಲಿದೆಯಂತೆ. ಅದರಂತೆ ರಾಜ್ಯದಲ್ಲಿ ಸಪ್ಟಂಬರ್ 1 ರ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ 2.1 ಲಕ್ಷಕ್ಕೆ ತಲುಪಲಿದೆಯಂತೆ. ಸದ್ಯ ರಾಜ್ಯದಲ್ಲಿ ದಿನವೊಂದಕ್ಕೆ 2ರಿಂದ 3 ಸಾವಿರದವರೆಗೆ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿರೋದನ್ನು ನೋಡಿದ್ರೆ ಖಂಡಿತವಾಗಿಯೂ ಈ ವರದಿ ನಿಜವಾಗುತ್ತೇನೋ ಅನ್ನೋ ಆತಂಕ ಸಹಜವಾಗಿಯೇ ಕಾಡುತ್ತದೆ. ಈಗಲೇ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಸರಿಯಾಗಿ ಬೆಡ್ ಗಳು ಸಿಗುತ್ತಿಲ್ಲ. ಚಿಕಿತ್ಸೆ ಸಿಗದೇ ಅದೆಷ್ಟೋ ಜನ ಸಾವಿನ ಮನೆಯ ದಾರಿ ಹಿಡಿಯುತ್ತಿದ್ದಾರೆ. ಹಾಗಾಗಿ ಮುಂದೇನು ಅನ್ನೋದು ಸದ್ಯ ಹಲವರ ಚಿಂತೆ.ಆದರೆ ಇದಕ್ಕೆಲ್ಲಾ ಒಂದೇ ಪರಿಹಾರ ಅಂದ್ರೆ ಸ್ಟೇ ಹೋಮ್ ಸ್ಟೇ ಸೇಫ್..

ಐಐಎಸ್ ಸಿ 2.1 ರಾಜ್

ಅಧ್ಯಯನದಿಂದ ಆಘಾತಕಾರಿ ವರದಿ

ಸಟ್ಂಪಬರ್ 1 ರ ವೇಳೆಗೆ 2.1 ಸಾದ್ಯತೆ

ಆಗಸ್ಟ್ ವೇಲೆಗೆ 10 ಲಕ್ಷ

- Advertisement -
spot_img

Latest News

error: Content is protected !!