Wednesday, May 8, 2024
Homeಕರಾವಳಿಶಿವಮೊಗ್ಗದಲ್ಲಿ 15 ಕ್ಕೂ ಹೆಚ್ಚು ಅಗ್ನಿ ಅವಘಡ ಪ್ರಕರಣಗಳಲ್ಲಿ ಶಾರಿಕ್ ಕೈವಾಡ; ವಿಚಾರಣೆ ವೇಳೆ ಎನ್...

ಶಿವಮೊಗ್ಗದಲ್ಲಿ 15 ಕ್ಕೂ ಹೆಚ್ಚು ಅಗ್ನಿ ಅವಘಡ ಪ್ರಕರಣಗಳಲ್ಲಿ ಶಾರಿಕ್ ಕೈವಾಡ; ವಿಚಾರಣೆ ವೇಳೆ ಎನ್ ಐಎ ಅಧಿಕಾರಿಗಳ ಮುಂದೆ ಸ್ಫೋಟಕ ಸತ್ಯ ಬಯಲು

spot_img
- Advertisement -
- Advertisement -

ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ ನನ್ನು ಹೆಚ್ಚಿನ ವಿಚಾರಣೆಗಾಗಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಇದೀಗ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ.

ಶಾರಿಕ್  ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದ 15 ಕ್ಕೂ ಹೆಚ್ಚು ಅಗ್ನಿ ಅವಘಡ ಪ್ರಕರಣಗಳಲ್ಲಿ ಈತನ ಕೈವಾಡವಿರುವುದು ತನಿಖೆ ವೇಳೆ ಬಯಲಾಗಿದೆ. ಕೋಣಂದೂರಿನಲ್ಲಿ ಲಾರಿಯಲ್ಲಿ ಬೆಂಕಿ ಅವಘಡ , ಆರಗದಲ್ಲಿ ಡೀಸೆಲ್ ಟ್ಯಾಂಕರ್ ನಲ್ಲಿ ಬೆಂಕಿ ಸೇರಿ ತೀರ್ಥಹಳ್ಳಿಯ ಹಲವು ಕಡೆ ಸಂಭವಿಸಿದ ಬೆಂಕಿ ದುರಂತದಲ್ಲಿ ಶಾರಿಕ್ ಕೈವಾಡವಿದೆ ಎನ್ನಲಾಗುತ್ತಿದೆ.

ಈ ಪ್ರಕರಣಗಳು ಈ ಹಿಂದೆ ಅಗ್ನಿ ಅವಘಡ ಕೇಸ್ ಎಂದು ದಾಖಲಾಗಿತ್ತು. ಶಾರಿಕ್ ಹಾಗೂ ಈತನ ಟೀಂ ಟ್ರಯಲ್ ಬ್ಲಾಸ್ಟ್ ಗೆ ಮಾರ್ಗದ ಬದಿಯ ವಾಹನಗಳನ್ನೇ ಪ್ರಮುಖವಾಗಿ ಟಾರ್ಗೆಟ್ ಮಾಡುತ್ತಿದ್ದವು. ಶಿವಮೊಗ್ಗದ ತುಂಗಾ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವುದಕ್ಕೆ ಮೊದಲೇ ತೀರ್ಥಹಳ್ಳಿಯಲ್ಲಿ ಕೂಡ ತಾಲೀಮು ನಡೆಸಿದ್ದನು ಎನ್ನಲಾಗಿದೆ.

- Advertisement -
spot_img

Latest News

error: Content is protected !!