Wednesday, April 16, 2025
Homeಕ್ರೀಡೆಐಪಿಎಲ್ ಅಬ್ಬರದ ನಡುವೆ ಆಟಗಾರರಿಗೆ ಶಾಕ್; SRH ತಂಡದ ಆಟಗಾರರು ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಅಗ್ನಿ ಅವಘಡ 

ಐಪಿಎಲ್ ಅಬ್ಬರದ ನಡುವೆ ಆಟಗಾರರಿಗೆ ಶಾಕ್; SRH ತಂಡದ ಆಟಗಾರರು ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಅಗ್ನಿ ಅವಘಡ 

spot_img
- Advertisement -
- Advertisement -

ಹೈದರಾಬಾದ್: ಐಪಿಎಲ್ ಸದ್ದಿನ ನಡುವೆಯೇ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಸದಸ್ಯರು ತಂಗಿದ್ದ ಪಂಚತಾರಾ ಹೋಟೆಲ್ ನಲ್ಲಿ ಸೋಮವಾರದಂದು ಅಗ್ನಿ ಅವಘಡ ಸಂಭವಿಸಿದೆ.

ಹೈದರಾಬಾದಿನ ಬಂಜಾರಾ ಹಿಲ್ಸ್ ಪ್ರದೇಶದಲ್ಲಿರುವ ಪಾರ್ಕ್ ಹಯಾತ್‌ ಹೋಟೆಲ್ ನ ಮೊದಲ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಇದರ ಪರಿಣಾಮವಾಗಿ ಹೋಟೆಲ್ ನಲ್ಲಿ ತಂಗಿದ್ದ ಎಸ್‌ಆರ್‌ಎಚ್‌ ತಂಡದ ಸದಸ್ಯರನ್ನು ಬೇರೆ ಹೋಟೆಲ್ ಗೆ ಸ್ಥಳಾಂತರಿಸಲಾಗಿದೆ. ಅಷ್ಟೇ ಅಲ್ಲದೆ ಹೋಟೆಲ್ ನಲ್ಲಿ ಉಳಿದಿದ್ದ ಇತರ ಮಂದಿಯನ್ನು ಕೂಡ ಹೊರ ಕರೆತರಲಾಗಿದೆ.

ಅಗ್ನಿಶಾಮಕ ತಂಡದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣ ಹಾನಿಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!