Wednesday, July 2, 2025
Homeತಾಜಾ ಸುದ್ದಿಎರಡನೇ ಬಾರಿಗೆ ಕೇಂದ್ರ ಸಚಿವೆಯಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಶೋಭಾ ಕರಂದ್ಲಾಜೆ

ಎರಡನೇ ಬಾರಿಗೆ ಕೇಂದ್ರ ಸಚಿವೆಯಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಶೋಭಾ ಕರಂದ್ಲಾಜೆ

spot_img
- Advertisement -
- Advertisement -

ಬೆಂಗಳೂರು: ಎರಡನೇ ಬಾರಿಗೆ ಕೇಂದ್ರ ಸಚಿವೆಯಾದ ಬಳಿಕ ಶೋಭಾ ಕರಂದ್ಲಾಜೆ ಮೊದಲ ಬಾರಿಗೆ ಇಂದು ರಾಜ್ಯಕ್ಕೆ ಆಗಮಿಸಿದರು.

ಬೆಂಗಳೂರಿಗೆ ಆಗಮಿಸಿದ ಶೋಭಾ ಕರಂದ್ಲಾಜೆ ಅವರಿಗೆ ದೇವನಹಳ್ಳಿಯ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸ್ವಾಗತ ಕೋರಿದರು.‌

ನಂತರ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನಕ್ಕೆ ಆಗಮಿಸಿದ ವೇಳೆ ಕೂಡಾ ಶೋಭಾ ಕರಂದ್ಲಾಜೆ ಅವರಿಗೆ ಸ್ವಾಗತ ಕೋರಲಾಯಿತು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಭಾರತ ಮಾತೆ ಭಾವಚಿತ್ರ ಮತ್ತು ಜಗನ್ನಾಥ ರಾವ್ ಜೋಶಿ ಪುತ್ಥಳಿಗೆ ಶೋಭಾ ಕರಂದ್ಲಾಜೆ ಪುಷ್ಪಾರ್ಚನೆ ಮಾಡಿದರು.

ಕೇಂದ್ರ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಕಲ್ಯಾಣ ಇಲಾಖೆಗಳ ರಾಜ್ಯ ಸಚಿವೆಯಾಗಿ ಅಧಿಕಾರ ಸ್ವೀಕರಿಸಿರುವ ಶೋಭಾ ಕರಂದ್ಲಾಜೆ ನಿನ್ನೆ ನವದೆಹಲಿಯಲ್ಲಿ ತಮ್ಮ ಇಲಾಖೆಗಳ ಸಭೆಗಳಲ್ಲಿ ಪಾಲ್ಗೊಂಡಿದ್ದರು.

- Advertisement -
spot_img

Latest News

error: Content is protected !!