Thursday, April 25, 2024
Homeಕರಾವಳಿಬೆಳ್ತಂಗಡಿ; ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಶಿಷ್ಯೋಪನಯನ ಸಮಾರಂಭ

ಬೆಳ್ತಂಗಡಿ; ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಶಿಷ್ಯೋಪನಯನ ಸಮಾರಂಭ

spot_img
- Advertisement -
- Advertisement -

ಬೆಳ್ತಂಗಡಿ; ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಶಿಷ್ಯೋಪನಯನ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ವಿಶ್ವಗುರು ಮಹಾಮಂಡಲೇಶ್ವರ ಪರಮಹಂಸ ಸ್ವಾಮಿ ಮಹೇಶ್ವರಾನಂದಜಿ ಆಶೀರ್ವಚನ ನೀಡಿದರು.

ಈ ವೇಳೆ ಮಾತನಾಡಿದ ಅವರು ಹಿತ-ಮಿತವಾದ ಶುದ್ಧ ಸಸ್ಯಾಹಾರ ಸೇವನೆಯೊಂದಿಗೆ ಯೋಗಾಭ್ಯಾಸ ನಮ್ಮ ದೈನಂದಿನ ಜೀವನ ಶೈಲಿಯಾದಾಗ ಆರೋಗ್ಯಭಾಗ್ಯ ರಕ್ಷಣೆ ಸಾಧ್ಯವಾಗುತ್ತದೆ ಎಂದರು..

ವಿಶ್ವದ ಸಕಲ ಜೀವರಾಶಿಗಳಲ್ಲಿ ಮನುಷ್ಯಜನ್ಮ ಶ್ರೇಷ್ಠವಾಗಿದ್ದು ಮದ್ಯ, ಮಾಂಸ, ಮಧು ತ್ಯಾಗ ಮಾಡಿ, ತಾಯಿ ಮತ್ತು ಭೂಮಿ ತಾಯಿಗೆ ವಿಸೇಷ ಗೌರವ, ಮಾನ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು. ನಿತ್ಯವೂ ಯೋಗಾಭ್ಯಾಸದಿಂದ ನಾವು ಪರಿಪೂರ್ಣ ಮನುಷ್ಯರಾಗಿ ಆರೋಗ್ಯಪೂರ್ಣ ಜೀವನ ನಡೆಸಬಹುದು ಎಂದು ಅವರು ಅಭಿಪ್ರಾಯಪಟ್ಟರು.ಇದೇ ಸಂದರ್ಭದಲ್ಲಿ ಕ್ರೊನೇಶಿಯಾದ ಅಗ್ನಿದೇವಿ ಮತ್ತು ಸ್ವಾಮಿ ಅವತಾರ ಗುರೂಜಿ ಶುಭಾಶಂಸನೆ ಮಾಡಿದರು.

ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ಮಾತನಾಡಿ ವಿಶ್ವದೆಲ್ಲೆಡೆ ಇಂದು ಯೋಗಾಭ್ಯಾಸ ಜನಪ್ರಿಯವಾಗುತ್ತಿದ್ದು ದೈಹಿಕ ಮತ್ತು ಮಾನಸಿಕ ಆರೋಗ್ಯದೊಂದಿಗೆ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸಲು ಯೋಗಾಭ್ಯಾಸ ಅನಿವಾರ್ಯವಾಗಿದೆ. ಪ್ರಕೃತಿಚಿಕಿತ್ಸಾ ಪದ್ಧತಿ ಮತ್ತು ಯೋಗದ ಮಹತ್ವ ಪ್ರಚಾರ ಮತ್ತು ಪ್ರಸಾರಕ್ಕಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬೆಂಗಳೂರು, ಧರ್ಮಸ್ಥಳ ಮತ್ತು ಪರೀಕಾದಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಪ್ರಾರಂಭಿಸಿದ್ದಾರೆ. ದೇಶದಲ್ಲೆ ಪ್ರಥಮವಾಗಿ ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜು ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳು ಇಲ್ಲಿನ ಸೌಲಭ್ಯ-ಸವಲತ್ತುಗಳ ಸದುಪಯೋಗ ಮಾಡಿ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಡಾ. ಗೀತಾ ಶೆಟ್ಟಿ ಧನ್ಯವಾದ ಅರ್ಪಿಸಿದರು. ಡಾ. ಜೋಸ್ನಾ ಮತ್ತು ಡಾ. ಅನಿಕಾ ಕಾರ್ಯಕ್ರಮ ನಿರ್ವಹಿಸಿದರು.

- Advertisement -
spot_img

Latest News

error: Content is protected !!