Saturday, August 1, 2026
Homeಕರಾವಳಿಉಡುಪಿಉಡುಪಿ: ಪೊಲೀಸರ ಹೆಸರಲ್ಲಿ ಬೆದರಿಸಿ 11 ಲಕ್ಷ ರೂಪಾಯಿ ವಂಚಿಸಿದ ಸೈಬರ್ ಕಳ್ಳರು

ಉಡುಪಿ: ಪೊಲೀಸರ ಹೆಸರಲ್ಲಿ ಬೆದರಿಸಿ 11 ಲಕ್ಷ ರೂಪಾಯಿ ವಂಚಿಸಿದ ಸೈಬರ್ ಕಳ್ಳರು

- Advertisement -
- Advertisement -

ಉಡುಪಿ: ಪೊಲೀಸರ ಹೆಸರಲ್ಲಿ ಬೆದರಿಸಿ ಸೈಬರ್ ಕಳ್ಳರು 11 ಲಕ್ಷ ರೂಪಾಯಿ ವಂಚಿಸಿದ ಘಟನೆ ಉಡುಪಿ ಜಿಲ್ಲೆಯ ಶಿರ್ವದಲ್ಲಿ ನಡೆದಿದೆ. 

“ನಿಮ್ಮ ಸಿಮ್ ಮೇಲಿಂದ 20 ಕೇಸ್‌ಗಳು ಆಗಿವೆ… ಮನಿ ಲಾಂಡ್ರಿಂಗ್ ಹಗರಣದಲ್ಲಿ ನಿಮ್ಮ ಹೆಸರಿದೆ!”— ಹೌದು, ಈ ಒಂದೇ ಒಂದು ಬೆದರಿಕೆ ಕರೆಯಿಂದ ಭಯಬಿದ್ದ ವ್ಯಕ್ತಿಯೊಬ್ಬರು ಬೊಗಸೆ ಗಟ್ಟಲೆ ಹಣ ಕಳೆದುಕೊಂಡ ಭೀಕರ ಘಟನೆ ಶಿರ್ವ ನಿವಾಸಿ ವಿಲ್ಲಿಯಮ್ ಪಾವ್ಲ್ ಕೊರೆಯ ಎಂಬವರಿಗೆ ಜುಲೈ 28 ರಂದು ಅಪರಿಚಿತ ನಂಬರ್‌ನಿಂದ ಕರೆಯೊಂದು ಬಂದಿತ್ತು. ಕರೆ ಮಾಡಿದ ಕಿರಾತಕರು, “ನಿಮ್ಮ ಹೆಸರಿನಲ್ಲಿ ಇಶ್ಯೂ ಆಗಿರುವ ಸಿಮ್ ಕಾರ್ಡ್ ಬಳಸಿ ಅಕ್ರಮ ಎಸಗಲಾಗಿದೆ. ನಿಮ್ಮ ವಿರುದ್ಧ 20 ಪ್ರಕರಣಗಳು ಹಾಗೂ ‘ಮನಿ ಲಾಂಡ್ರಿಂಗ್’ ಕೇಸ್ ದಾಖಲಾಗಿದೆ” ಎಂದು ಬೆದರಿಸಿದ್ದಾರೆ. ಅಷ್ಟಕ್ಕೇ ನಿಲ್ಲಿಸದೇ, ಆರು ಜನರ ಫೋಟೋ ಕಳಿಸಿ “ಇವರು ನಿಮಗೆ ಗೊತ್ತಾ?” ಎಂದು ಮಾನಸಿಕವಾಗಿ ಹೆದರಿಸಿದ್ದಾರೆ.

ಅಷ್ಟರಲ್ಲೇ ಮತ್ತೊಬ್ಬ ಖದೀಮ, ತಾನು “ಮುಂಬೈನ ಕೊಲಬಾ ಪೊಲೀಸ್ ಸ್ಟೇಷನ್‌ನ ಸಬ್ ಇನ್ಸ್‌ಪೆಕ್ಟರ್ ಮ್ಯಾಥ್ಯೂ” ಎಂದು ಪರಿಚಯಿಸಿಕೊಂಡು ಮಾತು ಮುಂದುವರಿಸಿದ್ದಾನೆ. ಕೇಸ್‌ನಿಂದ ಪಾರಾಗಬೇಕಾದರೆ ತಕ್ಷಣ ಹಣ ವರ್ಗಾಯಿಸಬೇಕು ಎಂದು ಪೋಲಿಸ್ ದರ್ಪ ತೋರಿಸಿ ಬೆದರಿಕೆ ಒಡ್ಡಿದ್ದಾನೆ.ಖದೀಮರ ಖೆಡ್ಡಾಗೆ ಬಿದ್ದು ತೀವ್ರ ಆತಂಕಕ್ಕೊಳಗಾದ ವಿಲ್ಲಿಯಮ್ ಪಾವ್ಲ್, ಜುಲೈ 29 ರಂದು 6 ಲಕ್ಷ ರೂಪಾಯಿ ಹಾಗೂ ಜುಲೈ 30 ರಂದು 5 ಲಕ್ಷ ರೂಪಾಯಿ ಸೇರಿದಂತೆ ಒಟ್ಟು 11 ಲಕ್ಷ ರೂಪಾಯಿ ಹಣವನ್ನು ವಂಚಕರು ನೀಡಿದ ಖಾತೆಗೆ ವರ್ಗಾಯಿಸಿದ್ದಾರೆ.

ಬಳಿಕ ತಾನು ಮೋಸ ಹೋಗಿರುವುದು ಅರಿವಿಗೆ ಬರುತ್ತಿದ್ದಂತೆ ವಿಲ್ಲಿಯಮ್ ಪಾವ್ಲ್ ಅವರು ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಸೈಬರ್ ಕಳ್ಳರ ಬಲೆಗೆ ಬಿದ್ದ ಈ ಘಟನೆಗೆ ಸಂಬಂಧಿಸಿದಂತೆ ಶಿರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

 ಸೈಬರ್ ಎಚ್ಚರಿಕೆ: ಪೊಲೀಸರು, ಸಿಬಿಐ ಅಥವಾ ಮುಂಬೈ ಪೊಲೀಸರ ಹೆಸರಿನಲ್ಲಿ ವೀಡಿಯೊ ಕರೆ ಅಥವಾ ಆಡಿಯೋ ಕರೆ ಮಾಡಿ ಹೆದರಿಸಿದರೆ ಯಾರೂ ಹಣ ಹಾಕಬೇಡಿ. ತಕ್ಷಣ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿ!

- Advertisement -

Latest News

error: Content is protected !!