Monday, June 8, 2026
Homeತಾಜಾ ಸುದ್ದಿಕುಟುಂಬದ ಗೌಪ್ಯತೆಯನ್ನು ಗೌರವಿಸಿ ಎಂದ ನಟಿ ಶಿಲ್ಪಾ ಶೆಟ್ಟಿ!

ಕುಟುಂಬದ ಗೌಪ್ಯತೆಯನ್ನು ಗೌರವಿಸಿ ಎಂದ ನಟಿ ಶಿಲ್ಪಾ ಶೆಟ್ಟಿ!

- Advertisement -
- Advertisement -

ಮುಂಬೈ: ಶಿಲ್ಪಾ ಶೆಟ್ಟಿ ತನ್ನ ಪತಿ ರಾಜ್ ಕುಂದ್ರಾ ವಿರುದ್ಧದ ಅಶ್ಲೀಲ ಚಿತ್ರ ಪ್ರಕರಣ ಕುರಿತಂತೆ ಮೊದಲ ಬಾರಿಗೆ ಮೌನ ಮುರಿದಿದ್ದು,ಕುಟುಂಬದ ಗೌಪ್ಯತೆಯನ್ನು ಗೌರವಿಸಬೇಕೆಂದು ಪ್ರತಿಯೊಬ್ಬರನ್ನು ಕೇಳುತ್ತೇನೆ ಎಂದು ನಟಿ ತನ್ನ ಹೇಳಿಕೆಯನ್ನು ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.

ಕಳೆದ ಕೆಲ ದಿನಗಳು ಪ್ರತಿಯೊಂದು ವಿಧದಲ್ಲಿಯೂ ಸವಾಲುಭರಿತವಾಗಿವೆ. ಹಲವಾರು ವದಂತಿಗಳು ಹಾಗೂ ಆರೋಪಗಳು ಕೇಳಿಬರುತ್ತಿವೆ. ಮಾಧ್ಯಮ ಹಾಗೂ ಹಿತೈಷಿಗಳೆಂದು ಹೇಳಿಕೊಳ್ಳುವವರಿಂದಲೂ ಹಲವಾರು ಆರೋಪಗಳನ್ನು ನನ್ನ ಮೇಲೆ ಹೊರಿಸಲಾಗುತ್ತಿದೆ.

ಹಲವಾರು ಟ್ರೋಲಿಂಗ್ ನಡೆಯುತ್ತಿದೆ ಹಾಗೂ ಪ್ರಶ್ನೆಗಳನ್ನೂ ಕೇಳಲಾಗುತ್ತಿದೆ. ನನ್ನ ನಿಲುವು-ನಾನಿನ್ನೂ ಪ್ರತಿಕ್ರಿಯಿಸಿಲ್ಲ. ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅದರ ಬಗ್ಗೆ ನಾನು ಇನ್ನು ಮುಂದೆಯೂ ಪ್ರತಿಕ್ರಿಯಿಸುವುದಿಲ್ಲ.

ನನ್ನದೆಂದು ಹೇಳಿಕೊಂಡು ಸುಳ್ಳು ಹೇಳಿಕೆಗಳನ್ನು ಪ್ರಕಟಿಸಬೇಡಿ. ನಾನು ಯಾವುದೇ ವಿವರಣೆ ನೀಡುವುದಿಲ್ಲ, ತನಿಖೆ ನಡೆಯುತ್ತಿದೆ ಎಂದಷ್ಟೇ ಹೇಳಬಯಸುತ್ತೇನೆ. ನನಗೆ ಮುಂಬೈ ಪೊಲೀಸರು ಹಾಗೂ ನ್ಯಾಯವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆಯಿದೆ. ಸಾಧ್ಯವಿರುವ ಎಲ್ಲಾ ಕಾನೂನಾತ್ಮಕ ಪರಿಹಾರಗಳನ್ನು ನಾವು ಕೈಗೊಂಡಿದ್ದೇವೆ. ನಮ್ಮ ಮಕ್ಕಳಿಗಾಗಿಯಾದರೂ ನಮ್ಮ ಖಾಸಗಿತನವನ್ನು ಗೌರವಿಸಿ” ಎಂದು ಶಿಲ್ಪಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!