Wednesday, July 2, 2025
Homeಅಪರಾಧಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಚುನಾವಣೆ; ಎಫ್‌ಎಸ್‌ಟಿ ಅಧಿಕಾರಿಗಳಿಂದ ₹ 2.68 ಲಕ್ಷ ಜಪ್ತಿ

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಚುನಾವಣೆ; ಎಫ್‌ಎಸ್‌ಟಿ ಅಧಿಕಾರಿಗಳಿಂದ ₹ 2.68 ಲಕ್ಷ ಜಪ್ತಿ

spot_img
- Advertisement -
- Advertisement -

ಹಾವೇರಿ: ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಚುನಾವಣೆಯ ನಿಟ್ಟಿನಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ₹2.68 ಲಕ್ಷವನ್ನು ಎಫ್‌ಎಸ್‌ಟಿ ಅಧಿಕಾರಿಗಳು ಜಪ್ತಿ ಮಾಡಿದ ಘಟನೆ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ.

ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಸವಣೂರಿನ ಸುಭಾಷ್ ಗಡ್ಡೆಪ್ಪನವರ ಮನೆಯಲ್ಲಿ ಸಂಗ್ರಹಿಸಿದ್ದ ₹2.68 ಲಕ್ಷವನ್ನು, ಅವರ ಮನೆ ಮೇಲೆ ದಾಳಿ ಮಾಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ. 

ಇನ್ನು ಈ ಕುರಿತಂತೆ  ಸುಭಾಷ್ ಗಡ್ಡೆಪ್ಪನವರ ಮನೆಯಲ್ಲಿ ಹಣವಿದೆ ಎಂದು ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಆರೋಪಿಸುವುದರ ಜೊತೆಗೆ ಪ್ರತಿಭಟನೆಯನ್ನು ಕೂಡ ನಡೆಸಿದ್ದರು.

ಅಕ್ರಮ ಹಣವನ್ನು ಸಂಗ್ರಹಿಸಿದ್ದ ಆರೋಪದಡಿ ಸುಭಾಷ್ ಗಡ್ಡೆಪ್ಪನವರ ಅವರ ವಿರುದ್ಧ ಎನ್‌ಸಿಆರ್ ದಾಖಲಿಸಲಾಗಿದೆ ಎಂದು ಎಸ್ಪಿ ಅಂಶುಕುಮಾರ್ ತಿಳಿಸಿದರು‌.

- Advertisement -
spot_img

Latest News

error: Content is protected !!