Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಮೆದುಳು ಜ್ವರದಿಂದ ಕಿಲ್ಲೂರಿನ ಯುವಕ ಶಶಿರಾಜ್ ಪೂಜಾರಿ ನಿಧನ

ಬೆಳ್ತಂಗಡಿ : ಮೆದುಳು ಜ್ವರದಿಂದ ಕಿಲ್ಲೂರಿನ ಯುವಕ ಶಶಿರಾಜ್ ಪೂಜಾರಿ ನಿಧನ

- Advertisement -
- Advertisement -

ಬೆಳ್ತಂಗಡಿ : ಮಲವಂತಿಗೆ ಗ್ರಾಮದ ಕಿಲ್ಲೂರು,ರಾಗಿಕುಮೇರ್ ಮನೆ ನಿವಾಸಿ ಕೊರಗಪ್ಪ ಮತ್ತು ಲಲಿತಾ ದಂಪತಿಗಳ ಮೊದಲ ಪುತ್ರ ಶಶಿರಾಜ್ ಪೂಜಾರಿ (34) ಅವರು ಮೆದುಳು ಜ್ವರದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಏ.12ರಂದು ಬೆಳಗ್ಗಿನ ಜಾವ ನಿಧನರಾದರು.

ಕಳೆದ ಕೆಲ ದಿನಗಳಿಂದ ತಲೆನೋವು ಮತ್ತು ಜ್ವರದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ ಕಡಿಮೆ ಯಾಗದಿದ್ದಾಗ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು.ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಇಂದು ಬೆಳಗ್ಗಿನ ಜಾವ ನಿಧನರಾದರು.

ಮೃತರು ತಂದೆ ಕೊರಗಪ್ಪ ಪೂಜಾರಿ, ತಾಯಿ ಲಲಿತಾ,ಸಹೋದರ ಸಂದೀಪ್ ಪೂಜಾರಿ
ಹಾಗೂ ಬಂಧು ಬಳಗ ಹಾಗೂ ಅಪಾರ ಪ್ರಮಾಣದ ಕುಟುಂಬವರ್ಗದವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!