Sunday, May 19, 2024
Homeಕ್ರೀಡೆಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಶಶಾಂಕ್ ಮನೋಹರ್.. ಹಂಗಾಮಿಯಾಗಿ ಇಮ್ರಾನ್ ಖ್ವಾಜಾ

ಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಶಶಾಂಕ್ ಮನೋಹರ್.. ಹಂಗಾಮಿಯಾಗಿ ಇಮ್ರಾನ್ ಖ್ವಾಜಾ

spot_img
- Advertisement -
- Advertisement -

ದುಬೈ: ಶಶಾಂಕ್ ಮನೋಹರ್ ಅವರು ಬುಧವಾರ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಖ್ಯಸ್ಥರ ಹುದ್ದೆಯನ್ನು ತ್ಯಜಿಸಿದ್ದಾರೆ.

ಮುಂದಿನ ಮುಖ್ಯಸ್ಥರ ಚುನಾವಣೆ ಪ್ರಕ್ರಿಯೆ ನಡೆಯುವವರೆಗೂ ಉಪ ಮುಖ್ಯಸ್ಥರಾಗಿರುವ ಇಮ್ರಾನ್ ಖ್ವಾಜಾ ಹಂಗಾಮಿ ಮುಖ್ಯಸ್ಥರಾಗಲಿದ್ದಾರೆ. ನಾಗಪುರದ ಶಶಾಂಕ್ ಐಸಿಸಿಗೆ ನೇಮಕವಾದ ಮೊದಲ ಸ್ವತಂತ್ರ ಮುಖ್ಯಸ್ಥರಾಗಿದ್ದರು.

ಸದ್ಯ ಐಸಿಸಿ ಮುಖ್ಯಸ್ಥರಾಗಿರುವ ಶಶಾಂಕ್ ಮನೋಹರ್, ತಮ್ಮ ಅವಧಿ ಮುಗಿದ ಬಳಿಕ ತಾನು ಮರು ಆಯ್ಕೆಯತ್ತ ಆಸಕ್ತಿ ಹೊಂದಿಲ್ಲ ಎಂದು ಕಳೆದ ಡಿಸೆಂಬರ್‌ನಲ್ಲಿ ಹೇಳಿದ್ದರು. ಮನೋಹರ್ ಅವಧಿ ಮೇ ಅಂತ್ಯಕ್ಕೆ ಕೊನೆಗೊಂಡಿದೆ.

ಭಾರತೀಯ ಕ್ರಿಕೆಟ್ ಮಂಡಳಿ ( ಬಿಸಿಸಿಐ) ಅಧ್ಯಕ್ಷ ಸ್ಥಾನವನ್ನು ತೊರೆದ ಶಶಾಂಕ್ ಮನೋಹರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನ ಚೇರ್ಮನ್ ಆಗಿ 2016 ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಹಿಂದೆ ವೈಯಕ್ತಿಕ ಕಾರಣಗಳನ್ನು ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಶಶಾಂಕ್ ಮನೋಹರ್ ನಂತರ ತಮ್ಮ ನಿರ್ಧಾರ ಬದಲಾಯಿಸಿ, ಐಸಿಸಿಯಲ್ಲೇ ಮುಂದುವರೆದಿದ್ದರು. ಐಸಿಸಿ ಮೊದಲ ಸ್ವತಂತ್ರ ಮಹಿಳಾ ನಿರ್ದೇಶಕಿಯ ಆಯ್ಕೆ, ಅಂತಾರಾಷ್ಟ್ರೀಯ ಕ್ರಿಕೆಟ್ ಸ್ವರೂಪದಲ್ಲೂ ಬದಲಾವಣೆ ತಂದು ಕ್ರೀಡಾರಂಗದ ಬೆಳವಣಿಗೆಗೆ ದಾರಿ ಮಾಡಿದ್ದರು.

‘ಎರಡು ವರ್ಷಗಳ ಎರಡು ಅವಧಿಯನ್ನು ಮುಕ್ತಾಯಗೊಳಿಸಿದ್ದಾರೆ. ಅವರಾಗಿಯೇ ಈ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನಡೆದ ಮಂಡಳಿ ಸಭೆಯಲ್ಲಿ ಇಮ್ರಾನ್ ಖ್ವಾಜಾ ಅವರನ್ನು ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ’ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮುಖ್ಯಸ್ಥರಿಗೆ ಗರಿಷ್ಠ ಮೂರು ಅವಧಿಯಲ್ಲಿ(ಆರು ವರ್ಷ) ಕಾರ್ಯನಿರ್ವಹಿಸುವ ಅವಕಾಶ ಇದೆ. ಶಶಾಂಕ್ ಅವರು ಇನ್ನೂ ಒಂದು ವರ್ಷ ಐಸಿಸಿ ಮುಖ್ಯಸ್ಥರಾಗಿ ಇರಬಹುದಿತ್ತು. ಆದರೆ, ಮುಂದುವರಿಯದಿರಲು ಶಶಾಂಕ್ ಅವರೇ ನಿರ್ಧಾರ ಕೈಗೊಂಡಿದ್ದಾರೆ.

- Advertisement -
spot_img

Latest News

error: Content is protected !!