Saturday, June 13, 2026
Homeತಾಜಾ ಸುದ್ದಿವಿಶ್ವಹಿಂದೂ ಪರಿಷತ್ ನ ವೆಬ್ ಸೈಟ್ ಹ್ಯಾಕ್, ಕಾಶ್ಮೀರ ಪರ ಘೋಷಣೆ ಪೋಸ್ಟ್!

ವಿಶ್ವಹಿಂದೂ ಪರಿಷತ್ ನ ವೆಬ್ ಸೈಟ್ ಹ್ಯಾಕ್, ಕಾಶ್ಮೀರ ಪರ ಘೋಷಣೆ ಪೋಸ್ಟ್!

- Advertisement -
- Advertisement -

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕಸಂಘದ ಅಂಗಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್‌ನ ವೆಬ್‌ಸೈಟ್ ಅನ್ನು ಇಂದು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದು, ದೇಶದ್ರೋಹಿ ಘೋಷಣೆ ಪೋಸ್ಟ್ ಮಾಡಲಾಗಿದೆ.

ವೆಬ್‌ಸೈಟ್ ನ ಮುಖಪುಟದಲ್ಲಿ ಕಾಶ್ಮೀರ ಪರ ಘೋಷಣೆಗಳನ್ನು ಪೋಸ್ಟ್ ಮಾಡಿದ್ದು, ಆಡಳಿತಾರೂಢ ಬಿಜೆಪಿಯ ವಿರುದ್ಧ ಧ್ವನಿ ಎತ್ತಿ ಎಂದು ಸ್ಪಷ್ಟ ಕರೆ ನೀಡಲಾಗಿದೆ. ಹ್ಯಾಕ್ ಮಾಡಲಾದ ವೆಬ್‌ಸೈಟ್‌ನ ಸ್ಕ್ರೀನ್‌ಶಾಟ್ ನಲ್ಲಿ ಇದು “ಕಾಶ್ಮೀರಿಗಳಿಗೆ” ಎಂದು ಬರೆಯಲಾಗಿದೆ.

ಹ್ಯಾಕ್ ಮಾಡಲಾದ ವಿಎಚ್‌ಪಿ ವೆಬ್‌ಸೈಟ್‌ನ ಮುಖಪುಟದಲ್ಲಿ ಲವ್ ಜಿಹಾದ್ ನಂತಹ ಪೋಸ್ಟ್ ಏನೂ ಇಲ್ಲ ಎಂದು ಹೇಳಿಕೊಂಡಿದೆ.

ಭಾರತ ಸರ್ಕಾರವು ಕಳೆದ ವರ್ಷ 370ನೇ ವಿಧಿಯನ್ನು ರದ್ದುಗೊಳಿಸಿತು. ಈ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಸಂಯೋಜನೆಗೊಳ್ಳಲು ವಿಶೇಷ ಸ್ಥಾನಮಾನವನ್ನು ನೀಡಿತು.

- Advertisement -

Latest News

error: Content is protected !!