Thursday, June 4, 2026
HomeUncategorizedಬಂಟ್ವಾಳ: ಎ.ಸಿ.ಭಂಡಾರಿ ಮನೆಗೆ ಭೇಟಿಕೊಟ್ಟು ಆರೋಗ್ಯ ವಿಚಾರಿಸಿದ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಎ.ಸಿ.ಭಂಡಾರಿ ಮನೆಗೆ ಭೇಟಿಕೊಟ್ಟು ಆರೋಗ್ಯ ವಿಚಾರಿಸಿದ ಶಾಸಕ ರಾಜೇಶ್ ನಾಯ್ಕ್

- Advertisement -
- Advertisement -

ಬಂಟ್ವಾಳ: ವಿವಿಧ ರಸ್ತೆ ಕಾಮಗಾರಿಗಳ ಉದ್ಘಾಟನೆಗಾಗಿ ಸಜೀಪಮುನ್ನೂರಿಗೆ ಜ.18ರಂದು ತೆರಳಿದ್ದ ಬಂಟ್ವಾಳದ ಶಾಸಕರಾರು ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಮತ್ತು ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಎ.ಸಿ.ಭಂಡಾರಿ ಅವರ ಮನೆಗೆ ಭೇಟಿ ನೀಡಿದರು. ಅಲ್ಲದೆ ಅವರ ಆರೋಗ್ಯ ವಿಚಾರಿಸಿದರು.


ಈ ಸಂದರ್ಭದಲ್ಲಿ ಶಾಸಕರ ಜತೆಗೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದ ಎ.ಸಿ.ಭಂಡಾರಿ ಅವರು, ನಂದಾವರ ದೇವಸ್ಥಾನದಲ್ಲಿ ತಾನು ಅಧ್ಯಕ್ಷನಾಗಿರುವ ವೇಳೆ ತಡೆಗೋಡೆ ಹಾಗೂ ಇತರ ಕಾರ್ಯಗಳಿಗೆ ಅನುದಾನ ನೀಡಿರುವುದಕ್ಕೆ ಕೃತಜ್ಞತೆ ಅರ್ಪಿಸಿ ಇದರಿಂದ ಭಕ್ತರಿಗೆ ಸಾಕಷ್ಟು ಪ್ರಯೋಜನವಾಗಿದೆ. ಮುಂದೆ ನೇತ್ರಾವತಿ ನದಿ ಕಿನಾರೆಯ ರಸ್ತೆಯೂ ಅನುಷ್ಠಾನವಾದರೆ ಇನ್ನಷ್ಟು ಭಕ್ತರು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ ಎಂದರು.


ಮುಂಬಯಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್‌ಕುಮಾರ್ ಶೆಟ್ಟಿ ದಳಂದಿಲ, ಉದ್ಯಮಿ ವಿವೇಕ್ ಶೆಟ್ಟಿ ನಗ್ರಿಗುತ್ತು, ಚರಣ್ ಜುಮಾದಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!