Monday, May 20, 2024
Homeಕರಾವಳಿದಿ.ಶರತ್‌ ಮಡಿವಾಳರ ಜನ್ಮದಿನ: ಸ್ಮಾರಕ ಪೀಠಕ್ಕೆ ಪುಷ್ಪ ನಮನ

ದಿ.ಶರತ್‌ ಮಡಿವಾಳರ ಜನ್ಮದಿನ: ಸ್ಮಾರಕ ಪೀಠಕ್ಕೆ ಪುಷ್ಪ ನಮನ

spot_img
- Advertisement -
- Advertisement -

ಬಂಟ್ವಾಳ: ಆರ್‌ಎಸ್‌ಎಸ್‌ ಕಾರ್ಯಕರ್ತ ಸಜೀಪಮುನ್ನೂರು ಗ್ರಾಮದ ಕಂದೂರುಪಾಡಿಯ ದಿವಂಗತ ಶರತ್‌ ಮಡಿವಾಳರ ಜನ್ಮದಿನವಾದ ಇಂದು ಶರತ್ ಮಡಿವಾಳರ ಸ್ಮಾರಕ ಪೀಠಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಜೀಪ ಜನಸೇವಾ ಟ್ರಸ್ಟ್ ಅಧ್ಯಕ್ಷ ಯಶವಂತ ದೇರಾಜೆ, ಬೂಡ ಸದಸ್ಯ ಸಚಿನ್ ಮೆಲ್ಕಾರ್, ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷತ್ ಮುಖಂಡ ಲೋಹಿತ್ ಪಣೋಲಿಬೈಲು, ಅರುಣ್ ಕುಮಾರ್ ಕುಕ್ಕುದಕಟ್ಟೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣೇಶ್ ಕಾರಾಜೆ, ಭಜರಂಗದಳದ ರತನ್ ಬೊಳ್ಳಾಯಿ, ಮನೋಹರ ಕರ್ಕೇರಾ, ಸಂತೋಷ್ ಮರ್ತಾಜೆ, ರಂಜಿತ್ ಪೂಜಾರಿ ಕುದ್ರೆಬೆಟ್ಟು, ಶರತ್ ಮಡಿವಾಳರ ಅಪ್ಪ ಅಮ್ಮ ಮತ್ತು ಸಹೋದರಿಯರು ಹಾಗೂ ಹಲವು ಸ್ವಯಂಸೇವಕರು ಉಪಸ್ಥಿತರಿದ್ದು ಪುಷ್ಪ ನಮನ ಸಲ್ಲಿಸಿದರು.

ನಂತರ ‌ಸಜೀಪ ನಾಲ್ಕು ಗ್ರಾಮದಲ್ಲಿ ಅನ್ಯನ್ಯ ಖಾಯಿಲೆಯಿಂದ ಬಳಲುತ್ತಿರುವ ಕೆಲವು ಅಶಕ್ತ ಕುಟುಂಬದ ರೋಗಿಗಳಿಗೆ ಯಶವಂತ ದೇರಾಜೆ, ಸಚಿನ್ ಮೆಲ್ಕಾರ್, ಲೋಹಿತ್ ಪಣೋಲಿಬೈಲು ಇವರುಗಳು ನೇತೃತ್ವದಲ್ಲಿ ಅಗತ್ಯ ಮೆಡಿಸಿನ್’ಗಳನ್ನು ಉಚಿತವಾಗಿ ವಿತರಿಸಲಾಯಿತು.

ಶರತ್‌ ಮಡಿವಾಳರ ಹತ್ಯೆಯ ಕುರಿತು:

2017ರ ಜುಲೈ 4ರಂದು ಬಿ.ಸಿ.ರೋಡಿನ ಉದಯ ಲಾಂಡ್ರಿಯಲ್ಲಿ ಕೆಲಸ ಮುಗಿಸಿ ಅಂಗಡಿಯ ಬಾಗಿಲು ಹಾಕುತ್ತಿದ್ದ ವೇಳೆ ದುಷ್ಕರ್ಮಿಗಳು ಶರತ್‌ ಮೇಲೆರಗಿ ಮಾರಕಾಸ್ತ್ರಗಳಿಂದ ಕಡಿದು ಪರಾರಿಯಾಗಿದ್ದರು. ಗಂಭೀರ ಗಾಯಗೊಂಡಿದ್ದ ಶರತ್‌ನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ಪ್ರಯೋಜನವಾಗದೆ ಮೃತಪಟ್ಟಿದ್ದ.
ಶರತ್‌ ಹತ್ಯೆ ಬಳಿಕ ಜಿಲ್ಲೆಯಲ್ಲಿ ಅಶಾಂತಿಯ ವಾತವರಣ ನಿರ್ಮಾಣವಾಗಿತ್ತು. ಘಟನೆಯ ಬಳಿಕ 16 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಹತ್ಯೆಯ ಪ್ರಮುಖ ರೂವಾರಿ ಖಲಂದರ್‌ ನಿಸಾರ್‌ ಸುಮಾರು ಒಂದೂವರೆ ವರ್ಷಕ್ಕಿಂತಲೂ ಅಧಿಕ ಸಮಯ ತಲೆಮರೆಸಿಕೊಂಡಿದ್ದ.

- Advertisement -
spot_img

Latest News

error: Content is protected !!