Friday, June 5, 2026
Homeಕರಾವಳಿಬಂಟ್ವಾಳ: ಚಿಕ್ಕಪ್ಪನಿಂದಲೇ ಯುವತಿಯ ಮೇಲೆ ನಿರಂತರ ಅತ್ಯಾಚಾರ, ಪ್ರಕರಣ ದಾಖಲು

ಬಂಟ್ವಾಳ: ಚಿಕ್ಕಪ್ಪನಿಂದಲೇ ಯುವತಿಯ ಮೇಲೆ ನಿರಂತರ ಅತ್ಯಾಚಾರ, ಪ್ರಕರಣ ದಾಖಲು

- Advertisement -
- Advertisement -

ಬಂಟ್ವಾಳ: ಚಿಕ್ಕಪ್ಪನಿಂದಲೇ ನಿರಂತರವಾಗಿ ದೈಹಿಕ ಅತ್ಯಾಚಾರಗೊಳಗಾದ ಯುವತಿಯ ದೂರಿನ ಮೇರೆಗೆ ವ್ಯಕ್ತಿಯೋರ್ವನ ಮೇಲೆ ಅತ್ಯಾಚಾರ ಪ್ರಕರಣ ದಾಖಲಾದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾ.ಪ.ವ್ಯಾಪ್ತಿಯ ಆಲಾಡಿ ನಿವಾಸಿ ಪುರುಷೋತ್ತಮ ಎಂಬಾತ ಆತನ ಪತ್ನಿಯ ಅಕ್ಕ‌ನ ಮಗಳ ಮೇಲೆಯೇ ನಿರಂತರವಾಗಿ ಬೆದರಿಕೆ ಹಾಕಿ ಬಲಾತ್ಕಾರ ಮಾಡಿ ಅತ್ಯಾಚಾರ ಮಾಡಿದ್ದಾನೆ ಎಂದು ಕಾಲೇಜು ವಿದ್ಯಾರ್ಥಿನಿ ದೂರು ನೀಡಿದ್ದಾಳೆ.

ಮನೆಯವರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ ಮನೆಯವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಳೆದ ಒಂದು ವರ್ಷದಿಂದ ಯುವತಿ ಬಿಸಿರೋಡು ಸಂಬಂಧಿಕರ ಮನೆಯಿಂದ ಕಾಲೇಜು ಹೋಗುತ್ತಿದ್ದು ಅಲ್ಲೇ ಆರೋಪಿ ಪುರುಷೋತ್ತಮ ಕೂಡ ವಾಸವಾಗಿದ್ದ, ಅವಾಗಿಂದಲೇ ಆರೋಪಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿ ಅವಳ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡುತ್ತಲೇ ಬಂದಿದ್ದು ಪ್ರಸ್ತುತ ಈತನ ಟಾರ್ಚ್ರ್ ತಡೆಯಲಾಗದೆ ಮನೆಯವರಿಗೆ ತಿಳಿಸಿ ಠಾಣೆಗೆ ದೂರು ನೀಡಿದ್ದಾಳೆ.

- Advertisement -

Latest News

error: Content is protected !!