Thursday, June 4, 2026
Homeಕರಾವಳಿಬಂಟ್ವಾಳ: ಮನೆಯ ಮೇಲ್ಚಾವಣಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ನಿಧನ

ಬಂಟ್ವಾಳ: ಮನೆಯ ಮೇಲ್ಚಾವಣಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ನಿಧನ

- Advertisement -
- Advertisement -

ಬಂಟ್ಚಾಳ: ವಾರದ ಹಿಂದೆ ಮನೆಯ ಟೆರೇಸ್ ಮೇಲೆ ಇಟ್ಟಿಗೆ ಕಟ್ಟುವ ಕೆಲಸ ಮಾಡುತ್ತಿದ್ದ ವೇಳೆ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ..

ಮಂಚಿ ಚೌಕದ ಪಾಲು ನಿವಾಸಿ ರಾಜೇಶ್ (36) ಮೃತಪಟ್ಟ ವ್ಯಕ್ತಿ. ಜೂನ್ 8 ರಂದು ರಾಜೇಶ್ ಅವರು ಪಕ್ಕದ ಮನೆಯವರ ಮಹಡಿ ಮೇಲೆ ಇಟ್ಟಿಗೆ ಕಟ್ಟುತ್ತಿದ್ದ ವೇಳೆ ಕಾಂಕ್ರೀಟ್ ಮೆಲ್ಚಾವಣಿಯಿಂದ ಅಕಸ್ಮಾತ್ ಕಾಲು ಜಾರಿ ಕೆಳಕ್ಕೆ ಬಿದ್ದಿದ್ದರು. ನೆಲಕ್ಕೆ ಬಿದ್ದ ರಾಜೇಶ್ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆಯ ಕುರಿತು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎರಡು ವರ್ಷಗಳ ಹಿಂದೆಯಷ್ಟೆ ರಾಜೇಶ್ ಮದುವೆಯಾಗಿದ್ದು, ಆರ್ಥಿಕವಾಗಿ ಇವರು ಮನೆಯ ಆಧಾರಸ್ತಂಭವಾಗಿದ್ದರು.

- Advertisement -

Latest News

error: Content is protected !!