
ಬೆಂಗಳೂರು_ಕಿಚ್ಚ ಸುದೀಪ್ ಕ್ರಿಕೆಟ್ ಆಡುವುದನ್ನು ನೋಡಿ ಮೆಚ್ಚಿಕೊಂಡಿದ್ದೇವೆ. ಕ್ರಿಕೆಟಿಗರನ್ನು ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಕರೆಸಿ ಆಡಿದ್ದನ್ನು ನೋಡಿದ್ದೇವೆ. ಈಗ ಕಿಚ್ಚ ಚೆಸ್ ಆಟಕ್ಕೆ ಕೈ ಹಾಕಿದ್ದಾರೆ. ಮೊದಲ ಆಟದಲ್ಲೇ ಕಿಚ್ಚ 5 ಬಾರಿ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ಸವಾಲು ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತೆರೆಯ ಮೇಲೆ ಮಾತ್ರವಲ್ಲ ಮೈದಾನದಲ್ಲೂ ಆಟ ಆಡವಾಡಲು ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಸಲೆಬ್ರಿಟಿ ಕ್ರಿಕೆಟ್ ಲೀಗ್‌ಗೆ ಅಂತರಾಷ್ಟಿಯ ಕ್ರಿಕೆಟಿಗರನ್ನು ಕರೆಸಿ ಆಟವಾಡಿಸಿದ ಕೀರ್ತಿ ಕಿಚ್ಚ ಸುದೀಪ್‌ಗಿದೆ. ಇನ್ನು ಸಾಮಾಜಿಕ ಕಾರ್ಯಗಳಲ್ಲೂ ಸುದೀಪ್ ಸದ್ದಿಲ್ಲದೆ ತೊಡಗಿಗೊಂಡಿದ್ದಾರೆ. ಕೋವಿಡ್‌ನಿಂದ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಉದ್ದೇಶದಿಂದ ಆಟಕ್ಕೆ ಇಳಿದಿದ್ದಾರೆ.

ಈ ಬಾರಿ ಕಿಚ್ಚ ಆಟ ಆಡ್ತಿರೋದು ಕ್ರಿಕೆಟ್ ಅಲ್ಲ. ಬದಲಾಗಿ ಚೆಸ್. ಚೆಸ್ ಆಟಕ್ಕೆ ಇಳಿದಿರುವ ಕಿಚ್ಚ ಸುದೀಪ್ ವಿಶ್ವಚಾಂಪಿಯನ್ ಮತ್ತು ಗ್ರಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರ ಸವಾಲು ಎದುರಿಸಲಿದ್ದಾರೆ. ವಿಶ್ವನಾಥನ್ ಆನಂದ್ ಅವರು ಇತರ ಕೆಲವು ಸೇವಾ ಸಂಸ್ಥೆಗಳೊಂದಿಗ ಕೈಜೋಡಿಸಿ ಸೆಲೆಬ್ರಿಟಿಗಳ ವಿರುದ್ಧ ಚೆಸ್ ಆಡಲಿದ್ದಾರೆ. ಆಟವಾಡುವ ಮೂಲಕ ದೇಣಿಗೆ ಸಂಗ್ರಹ ಮಾಡಲಿದ್ದಾರೆ. ಭಾನುವಾರ ಸಂಜೆ 5ರಿಂದ ರಾತ್ರಿ 8 ಗಂಟೆಯವರೆಗೆ ಐದು ಬಾರಿ ವಿಶ್ವಚಾಂಪಿಯನ್ ಆಗಿರುವ ವಿಶ್ವನಾಥನ್ ಆನಂದ್ ಅವರು ಎರಡು ಬ್ಯಾಚ್‌ಗಳಲ್ಲಿ ಅರ್ಧ ಗಂಟೆಗಳಂತೆ ಹಲವು ಗಣ್ಯರೊಂದಿಗೆ ಏಕಕಾಲದಲ್ಲಿ ಚೆಸ್ ಆಡಲಿದ್ದಾರೆ. ವಿಶ್ವನಾಥನ್ ಆನಂದ್ ಒಮ್ಮೆಲೇ ನಟರಾದ ಅಮೀರ್ ಖಾನ್, ಕಿಚ್ಚ ಸುದೀಪ್, ರಿತೇಷ್ ದೇಶ್‌ಮುಖ್ ಸೇರಿದಂತೆ ಹಲವು ಸೆಲೆಬ್ರಿಟಿಗಳ ಸವಾಲು ಎದುರಿಸಲಿದ್ದಾರೆ.


