Saturday, June 13, 2026
Homeಕರಾವಳಿಇನ್ ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಯಿಂದ ಬಾಲಕಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ; ಕೇರಳ ಮೂಲದ ಆರೋಪಿಯ ಬಂಧನ

ಇನ್ ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಯಿಂದ ಬಾಲಕಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ; ಕೇರಳ ಮೂಲದ ಆರೋಪಿಯ ಬಂಧನ

- Advertisement -
- Advertisement -

ಬಂಟ್ವಾಳ: ಸಾಮಾಜಿಕ ಜಾಲತಾಣದಿಂದ ವ್ಯಕ್ತಿಯೊಬ್ಬನಿಗೆ ಇಬ್ಬರು ಅಪ್ರಾಪ್ತ ಬಾಲಕಿಯರು ಪರಿಚಯವಾಗಿದ್ದು, ಆತನು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಪೋಕ್ಸೊ ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ಬಂಧಿಸಿದ್ದಾರೆ.

ಇನ್ ಸ್ಟಾಗ್ರಾಂ ಮೂಲಕ ಸಾಲೆತ್ತೂರು ಮೂಲದ ಯುವತಿಯೊಬ್ಬಳಿಗೆ, ಕೇರಳ ಮೂಲದ ಯುವಕನ ಪರಿಚಯವಾಗಿದ್ದು, ಇವರಿಬ್ಬರ ನಡುವೆ ದಿನದಿಂದ ದಿನಕ್ಕೆ ಆತ್ಮೀಯತೆ ಬೆಳೆದು ದೈಹಿಕ ಸಂಬಂಧದ ಹಂತಕ್ಕೆ ತಲುಪಿದೆ. ಹಾಗೆಯೇ ಆಕೆಯ ಪಕ್ಕದ ಮನೆಯ ಯುವತಿಗೂ ಈ ವ್ಯಕ್ತಿಯ ಪರಿಚಯವಾಗಿದೆ. ಇಬ್ಬರು ಯುವತಿಯರು ತಮ್ಮ ವಿಚಾರ ಹಂಚಿಕೊಂಡಾಗ ಇನ್ ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕ ಒಬ್ಬನೇ ಎಂಬುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಯುವಕ ಇಬ್ಬರ ಜತೆಗೂ ದೈಹಿಕ ಸಂಪರ್ಕ ನಡೆಸಿದ್ದು, ಯುವಕನ ವಿರುದ್ಧ ಕೆಲವು ದಿನಗಳ ಹಿಂದೆ ಯುವತಿ ಮನೆಯವರು ದೂರು ನೀಡಿದ್ದಾರೆ. ಈ ಘಟನೆಯ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಅಪ್ರಾಪ್ತ ಓರ್ವ ಯುವತಿ ಗರ್ಭಿಣಿಯೆಂಬ ಮಾಹಿತಿ ಕೇಳಿ ಬರುತ್ತಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಪ್ರಕರಣದ ತನಿಖೆ ನಡೆಸಬೇಕಾಗಿದೆ. .

- Advertisement -

Latest News

error: Content is protected !!