Monday, June 8, 2026
Homeಕೊಡಗುಮಡಿಕೇರಿ: ಕೃತಕ ಕೆರೆ ಸೃಷ್ಟಿ, ಅಪಾಯದ ಅಂಚಿನಲ್ಲಿ ಏಳು ಮನೆಗಳು

ಮಡಿಕೇರಿ: ಕೃತಕ ಕೆರೆ ಸೃಷ್ಟಿ, ಅಪಾಯದ ಅಂಚಿನಲ್ಲಿ ಏಳು ಮನೆಗಳು

- Advertisement -
- Advertisement -

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಜಿಲ್ಲೆಯ ಜನತೆ ಆತಂಕಕ್ಕೊಳಗಾಗಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ 175 ಮಿ.ಮಿ. ಗೂ ಅಧಿಕ ಮಳೆ ದಾಖಲಾಗಿದೆ.‌ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಬೆಟ್ಟಗುಡ್ಡ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ. ಆದರೂ ಕೂಡಾ ಅಪಾಯಕಾರಿ ಸ್ಥಳ ತೆರವುಗೊಳಿಸದ ಉದಯಗಿರಿ ಗ್ರಾಮಸ್ಥರು ಇನ್ನೂ ಅಪಾಯಕಾರಿ ಸ್ಥಳದಲ್ಲೇ ವಾಸಿಸುತ್ತಿದ್ದಾರೆ. ಜಿಲ್ಲಾಡಳಿತ ಕೂಡಾ ಆಪತ್ತಿನಲ್ಲಿರುವ ಏಳು ಕುಟುಂಬಗಳ ಸ್ಥಳಾಂತರಕ್ಕೆ ಮುಂದಾಗಿಲ್ಲ.‌

script async src=”https://pagead2.googlesyndication.com/pagead/js/adsbygoogle.js”>

ಮಡಿಕೇರಿ ತಾಲೂಕಿನ ಉದಯಗಿರಿ ಗ್ರಾಮ 2018 ರಲ್ಲಿ ಭೂ ಕುಸಿತಕ್ಕೆ ತತ್ತರಿಸಿತ್ತು. ಹಿಂದೆ ಭೂ‌ಕುಸಿತವಾದ ಸ್ಥಳದಲ್ಲೇ ಇದ್ದಕ್ಕಿದ್ದಂತೆ ಕೃತಕ ಕೆರೆ ಸೃಷ್ಟಿಯಾಗಿದೆ.‌ ಮೂರು ದಿನಗಳ ಹಿಂದೆ ಸೃಷ್ಟಿಯಾಗಿರುವ ಕೆರೆ,15 ಅಡಿಗೂ ಅಧಿಕ ಆಳವಿದೆ. ಕೆರೆಯಿಂದ ಕೆಲವೇ ಮೀಟರ್ ದೂರದಲ್ಲಿ ಹಲವು ಮನೆಗಳು ಇರುವುದು ಆತಂಕಕ್ಕೆ ಕಾರಣವಾಗಿದೆ.

script async src=”https://pagead2.googlesyndication.com/pagead/js/adsbygoogle.js”>

ಇನ್ನು ಕಾವೇರಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು,ರಾತ್ರಿಯಿಂದ ಬೆಳಗಾಗುವುದರೊಳಗೆ ನದಿಯಲ್ಲಿ ನಾಲ್ಕು ಅಡಿ ನೀರು ಏರಿಕೆಯಾಗಿದೆ. ಮಡಿಕೇರಿ –ವಿರಾಜಪೇಟೆ ರಸ್ತೆಯಲ್ಲಿರುವ ಬೇತ್ರಿ ಸೇತುವೆಯನ್ನು ನದಿ ನೀರು ಸ್ಪರ್ಷಿಸಿದೆ.

-Advertisement-

Latest News

error: Content is protected !!