Thursday, June 4, 2026
Homeಕರಾವಳಿಸುಳ್ಯ: ಸಂಪರ್ಕ ಕಳೆದುಕೊಂಡ ಉಪ್ಪುಕಳದ 12 ಕುಟುಂಬಗಳಿಗೆ ಆಸರೆಯಾದ ಸೇವಾ ಭಾರತಿ‌ ತಂಡ: ಒಂದೇ ದಿನದಲ್ಲಿ...

ಸುಳ್ಯ: ಸಂಪರ್ಕ ಕಳೆದುಕೊಂಡ ಉಪ್ಪುಕಳದ 12 ಕುಟುಂಬಗಳಿಗೆ ಆಸರೆಯಾದ ಸೇವಾ ಭಾರತಿ‌ ತಂಡ: ಒಂದೇ ದಿನದಲ್ಲಿ ನಿರ್ಮಾಣವಾಯ್ತು ಸೇತುವೆ

- Advertisement -
- Advertisement -

ಸುಳ್ಯ: ಇಲ್ಲಿನ ಬಾಳುಗೋಡಿನ ಉಪ್ಪುಕಳದಲ್ಲಿ ಭಾರೀ ಮಳೆಯಿಂದಾಗಿ ಸೇತುವೆಯೊಂದು ಕೊಚ್ಚಿ ಹೋಗಿ 12 ಕುಟುಂಬಗಳು ಸಂಪರ್ಕ ಕಡಿದುಕೊಂಡಿದ್ದವು.

ಇದೀಗ ಒಂದೇ ದಿನದಲ್ಲಿ ಸಂಪರ್ಕ ಸೇತುವೆ ನಿರ್ಮಿಸಿ ಸೇವಾ ಭಾರತಿ‌ ತಂಡ ಗ್ರಾಮದ ಜನರಿಗೆ ನೆರವಾಗಿದೆ‌.
ಈ ಸೇತುವೆಯಿಂದಾಗಿ ತಮ್ಮ ಅವಶ್ಯಕತೆಗಳನ್ನು ಪೂರೈಸುವಂತಾಗಿದೆ.

ಉಪ್ಪುಕಳ ಅಯ್ಯಪ್ಪ‌ ಮಂದಿರದ ಬಳಿ ಹರಿಯುವ ಹಳ್ಳಕ್ಕೆ ಇದ್ದ ಅಡಿಕೆ ಮರದ ಸೇತುವೆ ಮೇಘಸ್ಪೋಟಕ್ಕೆ ಸಿಲುಕಿ ನೀರು ಪಾಲಾಗಿತ್ತು.ಇದೀಗ ಸುಮಾರು 50 ಫೀಟ್ ಅಗಲದಲ್ಲಿ ಹರಿಯುವ ಹಳ್ಳಕ್ಕೆ ಸೇತುವೆ ನಿರ್ಮಿಸಲಾಗಿದ್ದು, ಸುಳ್ಯ ಸೇವಾ ಭಾರತಿಯ 30 ಜನರ ತಂಡ ಕಾಡಿನಿಂದ ಬಿದಿರಿನ ಬೆತ್ತ ತಂದು ಅಡಿಕೆ ಮರ ಹಾಸಿ ಸೇತುವೆ ನಿರ್ಮಾಣ ಮಾಡಿದೆ. ಇದೀಗ ಸೇವಾ ಭಾರತಿ‌ ತಂಡದ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

Latest News

error: Content is protected !!