- Advertisement -
- Advertisement -
ಕೊಣಾಜೆ.ಸೆ-23: ಮಂಜನಾಡಿ ಬಳಿ ಮೂರು ಮನೆಗಳಿಂದ ಕಳ್ಳತನವಾದ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ.
ಮಂಜನಾಡಿ ತೌಡುಗೋಳಿ ಕ್ರಾಸ್ ನ ಅಶ್ರಫ್, ಮಂಜನಾಡಿ ಅನ್ಸಾರ್ ನಗರದ ಮುಸ್ತಫ ಹಾಗೂ ಮಂಜನಾಡಿ ಮಂಗಳಾಂತಿಯ ಸೂಫಿಕುಂಞಿ ಎಂಬವರ ಮನೆಗಳಿಗೆ ಕಳ್ಳರು ನುಗಿದ್ದಾರೆ.
ಸೂಫಿಕುಂಞಿ ಅವರ ಮನೆಯಿಂದ ಅಪಾರ ಪ್ರಮಾಣದ ನಗ ನಗದು ದೋಚಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಎಸಿಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.
- Advertisement -