Wednesday, June 24, 2026
Homeತಾಜಾ ಸುದ್ದಿಮತ್ತೆ ದಿಗಂತ್ ವಿಚಾರಣೆ ನಡೆಸಿದ ಸಿಸಿಬಿ, ದೂಧ್ ಪೆಢಾ ಮೊಬೈಲ್ ಸಿಕ್ತಾ ಮಹತ್ವದ ಸಾಕ್ಷಿ?

ಮತ್ತೆ ದಿಗಂತ್ ವಿಚಾರಣೆ ನಡೆಸಿದ ಸಿಸಿಬಿ, ದೂಧ್ ಪೆಢಾ ಮೊಬೈಲ್ ಸಿಕ್ತಾ ಮಹತ್ವದ ಸಾಕ್ಷಿ?

- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ಸಂಬಂಧ 2ನೇ ಬಾರಿಗೆ ಸಿಸಿಬಿ ಮುಂದೆ ಹಾಜರಾಗಿದ್ದ ನಟ ದಿಗಂತ್ ವಿಚಾರಣೆ ಅಂತ್ಯಗೊಂಡಿದ್ದು, ಅಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿರುವುದಾಗಿ ತಿಳಿಸಿದ್ದಾರೆ.

ಸಿಸಿಬಿ ನೋಟೀಸ್ ಹಿನ್ನೆಲೆಯಲ್ಲಿ 2ನೇ ಬಾರಿ ಬೆಂಗಳೂರಿನ ಚಾಮರಾಜಪೇಟೆ ಸಿಸಿಬಿ ಕಚೇರಿಗೆ ದಿಗಂತ್ ಹಾಜರಾಗಿದ್ದು, ಸತತ 3 ಗಂಟೆಗಳ ವಿಚಾರಣೆ ಬಳಿಕ ಹೊರ ಬಂದಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ದಿಗಂತ್, ನೀವು ಅಂದುಕೊಂಡ ಹಾಗೆ ಏನೂ ಆಗಿಲ್ಲ. ಮತ್ತೆ ವಿಚಾರಣೆಗೆ ಕರೆದರೆ ಬರುತ್ತೇನೆ. ಸಿಸಿಬಿ ಅಧಿಕಾರಿಗಳ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಡ್ರಗ್ಸ್ ಪ್ರಕರಣ ಸಂಬಂಧ ನಟ ದಿಗಂತ್ ಹಾಗೂ ಐಂದ್ರಿತಾ ಸೆ.16ರಂದು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದರು. ಅದಾದ ಬಳಿಕ ಇಂದು ನಟ ದಿಗಂತ್ ಅವರನ್ನು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟೀಸ್ ನೀಡಿತ್ತು. ನಟ ದಿಗಂತ್ ಅವರನ್ನು ಎರಡನೇ ಬಾರಿ ವಿಚಾರಣೆಗೆ ಸಿಸಿಬಿ ಕರೆದಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಅವರನ್ನು ಸಿಸಿಬಿ ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎನ್ನಲಾಗಿತ್ತು.

ಆದರೆ ಇದೀಗ ಸಿಸಿಬಿ ವಿಚಾರಣೆ ಬಳಿಕ ಹೊರ ಬಂದ ನಟ ಮಾಧ್ಯಮಗಳು ಅಂದುಕೊಂಡಂತೆ ಏನೂ ಆಗಿಲ್ಲ. ಮತ್ತೆ ವಿಚಾರಣೆಗೆ ಕರೆದರೆ ಬರಲು ಸಿದ್ಧ ಎಂದಿದ್ದಾರೆ. ಇನ್ನು ದಿಗಂತ್ ಹಾಗೂ ಐಂದ್ರಿತಾ ಅವರನ್ನು ಮೊದಲ ಬಾರಿಗೆ ವಿಚಾರಣೆಗೆ ಕರೆದಾಗಲೇ ಇಬ್ಬರ ಮೊಬೈಲ್ ನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದೀಗ ಮತ್ತೆ ಅವರನ್ನು ವಿಚಾರಣೆಗೆ ಒಳಪಡಿಸಿರೋದು ನೋಡಿದರೆ ಮಹತ್ವದ ಸಾಕ್ಷ್ಯ ಸಿಕ್ಕಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

- Advertisement -

Latest News

error: Content is protected !!