Friday, June 5, 2026
Homeಕರಾವಳಿಮಂಗಳೂರು ಪೊಲೀಸರಿಂದ ಸರಣಿ ಕಳ್ಳತನದ ಆರೋಪಿಗಳಿಬ್ಬರ ಬಂಧನ

ಮಂಗಳೂರು ಪೊಲೀಸರಿಂದ ಸರಣಿ ಕಳ್ಳತನದ ಆರೋಪಿಗಳಿಬ್ಬರ ಬಂಧನ

- Advertisement -
- Advertisement -

ಮಂಗಳೂರು: ಸರಣಿ ಕಳ್ಳತನದ ಆರೋಪಿಗಳಿಬ್ಬರನ್ನು ಮಂಗಳೂರು ಉತ್ತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಕಸಬಾ ಬೇಂಗ್ರೆ ನಿವಾಸಿಗಳಾದ ಮೊಹಮ್ಮದ್‌ ಆಸೀಫ್ ಮತ್ತು ಮಹಮ್ಮದ್ ಸಫ್ವಾನ್ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತ ಅರೋಪಿಗಳನ್ನು ಮಂಗಳೂರಿನ ಧಕ್ಕೆಯಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವು ಮಾಡಿದ್ದ ಪ್ರಕರಣ ಸಂಬಂಧ ಪೊಲೀಸರು ಅರೆಸ್ಟ್ ಮಾಡಿದ್ದರು.

ವಿಚಾರಣೆ ನಡೆಸಿದ ಸಂಧರ್ಭದಲ್ಲಿ ಆರೋಪಿಗಳು ಸರಣಿ ಕಳ್ಳತನದಲ್ಲಿ ತೊಡಗಿದ್ದ ತೊಡಗಿದ್ದ ವಿಚಾರ‌ ಬಯಲಾಗಿದೆ. ಪಡುಬಿದ್ರಿ ಗ್ರಾಮ ಸೇವಾ ಕೇಂದ್ರದ ಕಳವು, ಮಂಗಳೂರು ಪೂರ್ವ ಠಾಣೆ ವ್ಯಾಪ್ತಿಯಲ್ಲಿನ ಸರಣಿ ಕಳ್ಳತ‌ನ, ಬಂಟ್ವಾಳ ನಗರ ಠಾಣೆ ವ್ಯಾಪ್ತಿಯಲ್ಲಿನ ಸರಣಿ ಕಳ್ಳತನ ಮತ್ತು ಮಂಗಳೂರು ದಕ್ಷಿಣ ಠಾಣೆ ವ್ಯಾಪ್ತಿಯಲ್ಲಿನ ಸ್ಕೂಟರ್ ಕಳ್ಳತನ ಪ್ರಕರಗಳು ಪ್ರಕರಣಗಳು ಸೇರಿ ಒಟ್ಟು ಎಂಟು ಪ್ರಕರಣಗಳು ಬಯಲಾಗಿವೆ. ಬಂಧನದ ವೇಳೆ ಆರೋಪಿಗಳಿಂದ ಎರಡು ಸ್ಕೂಟರ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!