Friday, May 10, 2024
Homeಕರಾವಳಿನಿರ್ಮಾಣ ಹಂತದ ರೈಲ್ವೇ ಅಂಡರ್ ಬಿಡ್ಜ್ ಕುಸಿತ; ಮೂವರು ಕಾರ್ಮಿಕರಿಗೆ ಗಾಯ

ನಿರ್ಮಾಣ ಹಂತದ ರೈಲ್ವೇ ಅಂಡರ್ ಬಿಡ್ಜ್ ಕುಸಿತ; ಮೂವರು ಕಾರ್ಮಿಕರಿಗೆ ಗಾಯ

spot_img
- Advertisement -
- Advertisement -

ಮಂಗಳೂರು: ಇಲ್ಲಿನ ಜೆಪ್ಪುವಿನ ಬಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೇ ಬಿಡ್ಜ್ ಕುಸಿದು ಬಿದ್ದ ಪರಿಣಾಮ ಮೂವರು ಕಾರ್ಮಿಕರಿಗೆ ಗಾಯಗಳಾದ ಘಟನೆ ಸೋಮವಾರ ಸಂಜೆ ಮಂಗಳೂರಿನಲ್ಲಿ ನಡೆದಿದೆ.

ಮುಂಬೈ ಮೂಲದ ವಿಜಯ್ ಇನ್ಫ್ರಾ ಪ್ರಾಜೆಕ್ಟ್ ಖಾಸಗಿ ಲಿಮಿಟೆಡ್ ಸಂಸ್ಥೆಯು ಸೇತುವೆ ಕಾಮಗಾರಿಯನ್ನು ಗುತ್ತಿಗೆ ವಹಿಸಿಕೊಂಡಿದ್ದು, ರೈಲ್ವೆಅಂಡರ್ ಬಿಡ್ಜ್ ಗಾಗಿ ಸ್ಲ್ಯಾಬ್ ನಿರ್ಮಾಣ ಕಾರ್ಯ ನಡೆಯುತ್ತಿತ್ತು. 12 ಜನ ಕಾರ್ಮಿಕರ ಗುಂಪು ಸೇತುವೆ ಕಾಮಗಾರಿಯಲ್ಲಿ ತಲ್ಲೀನರಾಗಿದ್ದು, ಈ ವೇಳೆಯಲ್ಲಿಯೇ ಸೇತುವೆ ಕುಸಿದು ಬಿದ್ದಿದೆ. ಘಟನೆಯು ಸುಮಾರು ಸಂಜೆ 5.30 ರ ವೇಳೆಗೆ ನಡೆದಿರುತ್ತದೆ.

ಕಾರ್ಮಿಕರು ಪವಾಡ ಸದೃಶ್ಯ ಪಾರಾಗಿದ್ದಾರೆ. ಈ ವೇಳೆಯಲ್ಲಿ ಮೂವರು ಕಾರ್ಮಿಕರಿಗೆ ಗಾಯಗಳಾಗಿವೆ ಎನ್ನಲಾಗಿದೆ. ಇನ್ನು ರೈಲ್ವೇ ಸ್ಲ್ಯಾಬ್ ನಿರ್ಮಾಣಕ್ಕಾಗಿ 10 ಲೋಡ್ ಕಾಂಕ್ರೀಟ್ ಹಾಕಿ, 11 ನೇ ಲೋಡ್ ಕಾಂಕ್ರಿಟ್ ನ್ನು ಸ್ಲ್ಯಾಬ್‌ಗೆ ಹಾಕಿದಾಗ ಬ್ರಿಡ್ಜ್ ಕುಸಿದಿದೆ. ಸೇತುವೆ ಕಾಮಗಾರಿ ಕಳೆದ ಆರು ತಿಂಗಳಿಂದ ನಡೆಯುತ್ತಿತ್ತು.

- Advertisement -
spot_img

Latest News

error: Content is protected !!