Saturday, October 17, 2026
Homeಕರಾವಳಿಮಂಗಳೂರು:ಸರಣಿ ಅಪಘಾತವಾಗಿ 10ಕ್ಕೂ ಹೆಚ್ಚು ವಾಹನಗಳು ಜಖಂ

ಮಂಗಳೂರು:ಸರಣಿ ಅಪಘಾತವಾಗಿ 10ಕ್ಕೂ ಹೆಚ್ಚು ವಾಹನಗಳು ಜಖಂ

- Advertisement -
- Advertisement -

ಮಂಗಳೂರು: ಸರಣಿ ಅಪಘಾತವಾಗಿ 10ಕ್ಕೂ ಹೆಚ್ಚು ವಾಹನಗಳು ಜಖಂ ಆಗಿರುವ ಘಟನೆ ಮಂಗಳೂರಿನ ಬಾವುಟಗುಡ್ಡೆ ಬಳಿ ಶುಕ್ರವಾರ ಸಂಜೆ ನಡೆದಿದೆ.

ಬಾವುಟಗುಡ್ಡೆಯಿಂದ ಜ್ಯೋತಿ ವೃತ್ತದ ಕಡೆಗೆ ತೆರಳುತ್ತಿದ್ದ ಬಸ್ ಅಕ್ಕಪಕ್ಕದಲ್ಲಿದ್ದ ಕಾರು, ಬೈಕ್‌ಗಳಿಗೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.ಒಂದು ಬೈಕ್ ಬಸ್ಸಿನಡಿಗೆ ಬಿದ್ದಿದ್ದು ಸವಾರ ಅಪಾಯದಿಂದ ಪಾರಾಗಿದ್ದಾರೆ.ಬಸ್ ಚಾಲಕನಿಗೆ ತಲೆ ಸುತ್ತು ಬಂದು ನಿಯಂತ್ರಣ ಕಳೆದುಕೊಂಡ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!